ಕಲಬುರಗಿ:- ಚಾಲಕನ ನಿರ್ಲಕ್ಷ್ಯದಿಂದ ಡೀಸೆಲ್ ಟ್ಯಾಂಕರ್ ಅಂಗಡಿಯೊಂದಕ್ಕೆ ನುಗ್ಗಿರುವ ಘಟನೆ ಕಲಬುರಗಿ ಜಿಲ್ಲೆ ಶಹಬಾದ್ ತಾಲೂಕಿನ ಭಂಕೂರು ಗ್ರಾಮದಲ್ಲಿ ಜರುಗಿದೆ.
Advertisement
ಟ್ಯಾಂಕರ್‌ನ ಹ್ಯಾಂಡ್‌ಬ್ರೇಕ್ ಹಾಕದೇ ನಿಲ್ಲಿಸಿದ್ದ ಚಾಲಕ ಕಿರಾಣಿ ಅಂಗಡಿಗೆ ಹೋಗಿದ್ದ. ಈ ವೇಳೆ ಡ್ರೈವರ್ ಹಿಂದೆಯೇ ಡೀಸೆಲ್ ಟ್ಯಾಂಕರ್ ಕಿರಾಣಿ ಅಂಗಡಿಗೆ ನುಗ್ಗಿ ಅವಘಡ ಸಂಭವಿಸಿದೆ. ವಿಜಪ್ಪಗೌಡ ಎಂಬವರಿಗೆ ಸೇರಿದ ಕಿರಾಣಿ ಅಂಗಡಿ ಇದಾಗಿದ್ದು, ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ. ಕಿರಾಣಿ ಅಂಗಡಿ ಸಂಪೂರ್ಣ ಜಖಂಗೊಂಡಿದೆ. ಘಟನೆ ಸಂಬಂಧ ಶಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.