ವಿಜಯಸಾಕ್ಷಿ ಸುದ್ದಿ, ಗದಗ: ಶ್ರೀ ಜಗದ್ಗುರು ತೋಂಟದಾರ್ಯ ಮಠದ ಆವರಣದಲ್ಲಿ ಲಿಂಗಾಯತ ರುದ್ರಭೂಮಿ ವತಿಯಿಂದ ‘ಮರಳಿ ಧರೆಗೆ’ ಶವ ಸಾಗಿಸುವ ವಾಹನಕ್ಕೆ ತೋಂಟದಾರ್ಯ ಮಠದ ಆವರಣದಲ್ಲಿ ತೋಂಟದಾರ್ಯ ಮಠದ ಪೂಜ್ಯರಾದ ಶ್ರೀ ಸಿದ್ಧರಾಮ ಮಹಾಸ್ವಾಮಿಗಳು ಸಮ್ಮುಖದಲ್ಲಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.
ಈ ಸಂದರ್ಭ ಗಣ್ಯ ವ್ಯಾಪಾರಸ್ಥರಾದ ಈಶಣ್ಣ ಮುನವಳ್ಳಿ ಮಾತನಾಡಿ, ಸತತ 20 ವರ್ಷಗಳಿಂದ ಈ ವಾಹನವನ್ನು ಶವ ಸಂಸ್ಕಾರ ಕಾರ್ಯಕ್ಕೆ ಬಳಸಲಾಗುತ್ತಿತ್ತು. ವಾಹನ ದುರಸ್ಥಿ ಇದ್ದುದರಿಂದ ಕೆಲವು ತಿಂಗಳವರೆಗೆ ಸ್ಥಗಿತಗೊಂಡಿತ್ತು. ಸದರಿ ವಾಹನವನ್ನು ದುರಸ್ಥಿಗೊಳಿಸಿ ಮತ್ತೆ ಸಾರ್ವಜನಿಕರ ಸೇವೆಗಾಗಿ ಇಂದು ಶ್ರೀಮಠದ ಪೂಜ್ಯರ ಸಮ್ಮುಖದಲ್ಲಿ ಚಾಲನೆಗೊಳ್ಳುತ್ತಿದೆ. ಅದೇ ರೀತಿ ರುದ್ರಭೂಮಿಯನ್ನು ಸಹ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ತಿಳಿಸಿ ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಬಾಬಣ್ಣ ಮಾನ್ವಿ, ಎಫ್.ವಿ. ಮರಿಗೌಡ್ರ, ವಿರೂಪಾಕ್ಷಿ ದೇಸಾಯಿಗೌಡ್ರ, ವಿರೂಪಾಕ್ಷಪ್ಪ ಅಕ್ಕಿ, ವಾಯ್.ಎನ್. ಗೌಡರ, ಬಸವರಾಜ ಅಂಗಡಿ, ಶಾಂತಣ್ಣ ಮುಳವಾಡ, ಜಯರಾಮ ಕೋಟಿ, ಸಿದ್ದಲಿಂಗಪ್ಪ ಅರಳಿ, ಶಿವಯ್ಯ ನಾಲ್ವತವಾಡಮಠ, ವೀರಭದ್ರಪ್ಪ ಹೂಗಾರ, ಚಂದ್ರಶೇಖರಪ್ಪ ಅರಳಿ, ದಾನಯ್ಯ ಗಣಾಚಾರಿ, ಎ.ಎಸ್. ರಡ್ಡೇರ ಸೇರಿದಂತೆ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.