ಹುಬ್ಬಳ್ಳಿ ;-ಕುಡಿದು ವಾಹನ ಚಾಲನೆ ಮಾಡಿದ ಪರಿಣಾಮ ಸರಣಿ ಅಪರಾಧ ಸಂಭವಿಸಿದ್ದು, ಬಳಿಕ ಎಸ್ಕೇಪ್ ಆಗಲು ಕ್ಯಾಂಟರ್ ಚಾಲಕ ಯತ್ನಿಸಿರುವ ಘಟನೆ ಧಾರವಾಡ ಬೈಪಾಸ್ ರಸ್ತೆಯ ಕಾರವಾರ ಬ್ರಿಡ್ಜ್ ಬಳಿ ಜರುಗಿದೆ.
Advertisement
ಟ್ಯಾಂಕರ್ ವಾಹನದ ಚಾಲಕ ಮದ್ಯ ಕುಡಿದು ಎದುರಿಗೆ ಬರುತ್ತಿದ್ದ ವಾಹನಗಳಿಗೆ ಸರಣಿ ಅಪಘಾತ ಪಡಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ.
ಅದೇ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಲಾರಿ ಸಂಘದ ಅಧ್ಯಕ್ಷರು ಗಿರೀಶ್ ಮಲ್ನಾಡ್ ಇತರರು ಸೇರಿ ಪರಾರಿಯಾಗುತಿದ್ದ ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆಯಲ್ಲಿ ಮೂರು ವಾಹನಗಳು ಜಖಂ ಗೊಂಡಿದ್ದು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಚಾಲಕನನ್ನು ವಶಕ್ಕೆ ಪಡೆದು ಹೆಚ್ಚಿನ ಮಾಹಿತಿ ಪಡೆಯುತ್ತಿದ್ದಾರೆ.