ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕುಡಿದ ಅಮಲಿನಲ್ಲಿ ಕಾರು ಚಾಲನೆ ಮಾಡಿ ಚಲಿಸುತ್ತಿದ್ದ ಮೂರು ಬೈಕ್ ಹಾಗೂ ಕಾರ್ ಗೆ ಡಿಕ್ಕಿ ಹೊಡೆದ ಕಾರು ಚಾಲಕ ಅವಾಂತರ ಸೃಷ್ಟಿ ಮಾಡಿದ್ದಾನೆ. ವಾಸು ಎಂಬ ಚಾಲನ ಕುಡಿದು ಕಾರ್ ಚಾಲನೆ ಬಿಟಿಎಂ ಲೇಔಟ್ ನ 2 ನೇ ಹಂತದಲ್ಲಿ ಅವಾಂತರ ಸೃಷ್ಟಿ ಮಾಡಿದ್ದಾನ. ಕುಡಿದ ಅಮಲಿನಲ್ಲಿ ಕಾರನ್ನ ನಿಯಂತ್ರಣ ಮಾಡದೆ ಮುಂದೆ ಹೋಗುತ್ತಿದ್ದ ಬೈಕ್ ಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಕುಡಿದು ಕಾರ್ ಚಾಲನೆ ಮಾಡ್ತಿದ್ದ ಡ್ರೈವರ್ ನ ಹಿಡಿದು ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಬಳಿಕ ಚಾಲಕ ವಾಸುವನ್ನು ಪೊಲೀಸರಿಗೆ ಒಪ್ಪಿಸಿದ್ದು, ಮೈಕೋ ಲೇಔಟ್ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ವೃದ್ಧ ದಂಪತಿಗೆ ಸೇರಿದ ಕಾರ್ ದಾಗಿದ್ದು, ವಾಸು ದಂಪತಿ ಬಳಿ ಕಾರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕಾರ್ಯಕ್ರಮ ಮುಗಿಸಿ ಮನೆಗೆ ಹೋಗುವಾಗ ನಡೆದಿರೋ ಘಟನೆ ಇದಾಗಿದೆ ಎಂದು ತಿಳಿದು ಬಂದಿದೆ.