ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಉಪವಿಭಾಗದ ನಿಕಟಪೂರ್ವ ಉಪ ಪೊಲೀಸ್ ವರೀಷ್ಠಾಧಿಕಾರಿ ಜೆ.ಎಚ್. ಇನಾಮದಾರರಿಗೆ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪ್ರಶಸ್ತಿ ದೊರೆತಿದೆ.
Advertisement
ಬೆಂಗಳೂರಿನಲ್ಲಿ ಶನಿವಾರ ಜರುಗಿದ ಸಮಾರಂಭದಲ್ಲಿ ಡಿಎಸ್ಪಿ ಜೆ.ಎಚ್. ಇನಾಮದಾರರಿಗೆ ರಾಜ್ಯಪಾಲ ಥಾವರಚಂದ್ ಗೆಹಲೋಟ್, ಮುಖ್ಯಮಂತ್ರಿ ಸಿದ್ಧರಾಮಯ್ಯ, ಗೃಹ ಸಚಿವ ಡಾ. ಜಿ. ಪರಮೇಶ್ವರ ಪ್ರಶಸ್ತಿ ಪ್ರದಾನ ಮಾಡಿದರು. 1999ರಲ್ಲಿ ಗದಗ ಸಾರಿಗೆ ಪಿಎಸ್‌ಐ ಆಗಿ ಸೇವೆ ಪ್ರಾರಂಭಿಸಿದ ಜೆ.ಎಚ್. ಇನಾಮದಾರ, ರಷ್ಯಾದಲ್ಲಿ ಭಾರತೀಯ ಶಾಂತಿ ಪಡೆ, ಲಿಂಗಸೂಗೂರ, ನಾಗಠಾಣ, ವಿಜಯಪೂರ ಮುಂತಾದ ಕಡೆಗಳಲ್ಲಿ ಸಿಪಿಐ, ಡಿಎಸ್ಪಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಯಾದಗಿರಿಯಲ್ಲಿ ಲೋಕಾಯುಕ್ತ ಡಿಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.