ಸಾರಿಗೆ ಇಲಾಖೆ ಇಷ್ಟು ಬಡುವಾಯ್ತಾ? ಆಯುಧ ಪೂಜೆಗೆಂದು ಒಂದು ಬಸ್ ಗೆ ಕೊಟ್ಟ ಹಣ ಇಷ್ಟೇನಾ?

0
Spread the love

ಬೆಂಗಳೂರು:- ಆಯುಧ ಪೂಜೆಗೆ ಇನ್ನೇನೂ ಕೆಲವೇ ದಿನಗಳು ಬಾಕಿ ಇದ್ದು, ಸರ್ಕಾರಿ ಬಸ್‌ಗಳಿಗೆ ಪೂಜೆ ಸಲ್ಲಿಸಲು ಸಾರಿಗೆ ಇಲಾಖೆಯಿಂದ ಹಣ ಬಿಡುಗಡೆ ಮಾಡಲಾಗಿದೆ.

Advertisement

ಅದರಂತೆ ಪ್ರತಿ ಬಸ್‌ಗೆ ಕೇವಲ 150 ರೂ. ರಿಲೀಸ್‌ ಮಾಡಿದೆ. ಪ್ರತಿ ವರ್ಷ ದಸರಾ ಹಿನ್ನೆಲೆಯಲ್ಲಿ ಆಯುಧ ಪೂಜೆ ಹಬ್ಬದಲ್ಲಿ ಸಾರಿಗೆ ಬಸ್‌ಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಅದಕ್ಕಾಗಿ ಸಾರಿಗೆ ಇಲಾಖೆಯು ಪ್ರತಿ ಬಸ್‌, ಇಲಾಖಾ ವಾಹನಕ್ಕೆ ಹಣ ಬಿಡುಗಡೆ ಮಾಡಲಿದೆ. ಈ ಬಾರಿ ಕೇವಲ 150 ರೂ. ಬಿಡುಗಡೆ ಮಾಡಿದೆ. ಇದಕ್ಕೆ ಸಿಬ್ಬಂದಿ ಅಸಮಾಧಾನ ಹೊರಹಾಕಿದ್ದಾರೆ.

ಹಬ್ಬದ ದಿನಗಳಲ್ಲಿ ಹೂ-ಹಣ್ಣು, ಹಾರ ಎಲ್ಲದರ ಬೆಲೆಯೂ ಏರಿಕೆ ಆಗುವುದು ಸಾಮಾನ್ಯ. ಒಂದು ಮಾರು ಹೂವಿನ ಹಾರವೇ ಹಬ್ಬದಲ್ಲಿ 100 ರೂ. ದಾಟಲಿದೆ. ಕೇವಲ 150 ರೂಪಾಯಿಯಲ್ಲಿ ಒಂದು ವಾಹನಕ್ಕೆ ಪೂಜೆ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ವ್ಯಕ್ತವಾಗಿದೆ. ಸಿಬ್ಬಂದಿಯೇ ಹಣ ಹಾಕಿ ಹಬ್ಬ ಮಾಡುವ ಸ್ಥಿತಿ ನಿರ್ಮಾಣವಾಗಿದೆ.


Spread the love

LEAVE A REPLY

Please enter your comment!
Please enter your name here