ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಪೂಜಾರಿ ಇತ್ತೀಚೆಗೆ ಅಕಾಲಿಕ ಸಾವನ್ನಪ್ಪಿದ್ದಾರೆ. ಸ್ನೇಹಿತರ ಮದುವೆಯಲ್ಲಿ ಭಾಗಿಯಾಗಿದ್ದ ರಾಕೇಶ್ ಪೂಜಾರಿ ಹೃದಯಾಘಾತದಿಂದ ಮೃತಪಟ್ಟಿದ್ದು ರಾಕೇಶ್ ಸಾವಿಗೆ ಹಲವರು ಕಂಬನಿ ಮಿಡಿದಿದ್ದಾರೆ.
Advertisement
ನಟ, ನಿರ್ದೇಶಕ ದುನಿಯಾ ವಿಜಯ್ ಅವರು ರಾಕೇಶ್ ಪೂಜಾರಿ ಸಾವಿಗೆ ಕಂಬನಿ ಮಿಡಿದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ದುನಿಯಾ ವಿಜಯ್, ರಾಕಿ ಸಾವು ನಿಜಕ್ಕೂ ಬೇಸರ ತರಿಸಿದೆ. ನಾನೂ ಅವನ ಕಾಮಿಡಿ ವಿಡಿಯೋಸ್ ನೋಡುತ್ತಿದ್ದೆ. ಅವನು ನಗೋ ಸ್ಟೈಲ್ ನನಗೆ ಇಷ್ಟ. ಅವನ ಸಾವಿನ ದುಃಖ ತಡೆದುಕೊಳ್ಳುವ ಶಕ್ತಿ ಆ ತಾಯಿಗೆ ಸಿಗಲಿ ಎಂದಿದ್ದಾರೆ.
ರಾಕೇಶ್ ತಂಗಿಯ ಮದುವೆ ಮಾಡಲು ಅವನ ಸ್ನೇಹಿತರು ಅವರ ಕುಟುಂಬದ ಜೊತೆ ನಿಂತಿದ್ದಾರೆ. ರಾಕಿ ತಂಗಿಯ ಮದುವೆಗೆ ನಾನೂ ಸಹಾಯ ಮಾಡ್ತೀನಿ ಎಂದು ದುನಿಯಾ ವಿಜಯ್ ಭರವಸೆ ನೀಡಿದ್ದಾರೆ.