ದುಬೈನಲ್ಲಿ ಡಂಕಿ ಡ್ರಾಪ್-4 ಶೂಟ್

0
Spread the love

ಪಠಾಣ್ ಮತ್ತು ಜವಾನ್ ಸಿನಿಮಾದ ಯಶಸ್ಸಿನ ಅಲೆಯಲ್ಲಿರುವ ಬಾಲಿವುಡ್ ಬಾದ್ಷಾ ಶಾರುಖ್ ಖಾನ್, ತಮ್ಮ ಮುಂದಿನ ಸಿನಿಮಾ “ಡಂಕಿ”ಗಾಗಿ ಎದುರು ನೋಡುತ್ತಿದ್ದಾರೆ. ಅಭಿಮಾನಿಗಳು ಕೂಡ ಕಾತರದಿಂದ ಕಾಯುತ್ತಿದ್ದಾರೆ. ರಾಜ್ಕುಮಾರ್ ಹಿರಾನಿ ನಿರ್ದೇಶನ ಡಂಕಿ ಸಿನಿಮಾ, ಡಿ.21ರಂದು ಬಿಡುಗಡೆಯಾಗಲಿದ್ದು, ಈಗಾಗಲೇ ಟ್ರೈಲರ್ನಿಂದಲೇ ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದೆ.

Advertisement


ಡಂಕಿ ಡ್ರಾಪ್-3 ಬಳಿಕ ಡಂಕಿ ಡ್ರಾಪ್-4 ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಅದಕ್ಕಾಗಿ ಭರದಿಂದ ಚಿತ್ರೀಕರಣ ನಡೆಸಲಾಗಿದೆ. ಬಿಡುಗಡೆ ಸಜ್ಜಾಗಿರುವ ಹೊತ್ತಲ್ಲೇ ಇದೀಗ ಚಿತ್ರೀಕರಣ ಅಂತಾ ಹುಬ್ಬೇರಿಸಬೇಡಿ. ಡಂಕಿ ಚಿತ್ರದ ಸ್ಪೆಷಲ್ ನಂಬರ್ ಇತ್ತೀಚಿಗಷ್ಟೇ ಅಬುದಬಿಯಲ್ಲಿ ಶೂಟ್ ಮಾಡಲಾಗಿದೆ. ಸುಹಾನಾ ಖಾನ್ ಡೆಬ್ಯು ಸಿನಿಮಾದ ಪ್ರೀಮಿಯರ್ ಮುಗಿಸಿ ಯುಎಇಗೆ ಹಾರಿದ ಶಾರುಖ್ ಅಂಡ್ ಟೀಂ, ಮೂರು ದಿನ ಸ್ಪೆಷಲ್ ನಂಬರ್ ಚಿತ್ರೀಕರಣ ನಡೆಸಿದೆ.

ಶಾರುಖ್ ಖಾನ್ ಜತೆಗೆ ನಟಿ ತಾಪ್ಪಿ ಪನ್ನು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಟ ವಿಕ್ಕಿ ಕೌಶಲ್ ಗೆಸ್ಟ್ ರೋಲ್ ಮಾಡಿದ್ದಾರೆ. ಸಂಜು ಸಿನಿಮಾದ ಬ್ಲಾಕ್ ಬಸ್ಟರ್ ಸಕ್ಸಸ್ ಬಳಿಕ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರು ಡಂಕಿ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ‘ಡಂಕಿ’ ಸಿನಿಮಾವನ್ನು ಶಾರುಖ್ ಖಾನ್ ಒಡೆತನದ ರೆಡ್ ಚಿಲ್ಲೀಸ್ ಎಂಟರ್‌ಟೈನ್ಮೆಂಟ್ ಹಾಗೂ ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಹಾಗೂ ಜಿಯೋ ಸಿನಿಮಾಸ್ ಬ್ಯಾನರ್‌ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಾಣ ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here