ಧಾರ್ಮಿಕ ಕಲ್ಪನೆಗಳು ಉಳಿಯಬೇಕು : ಗುರುನಾಥ ದಾನಪ್ಪನವರ

0
Durga Dauda programme
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದಲ್ಲಿ ದಸರಾ ಹಬ್ಬದ ನಿಮಿತ್ತ ಈ ಭಾಗದಲ್ಲಿಯೇ ನೂತನ ಪ್ರಯೋಗವಾಗಿರುವ ದುರ್ಗಾದೌಡ ಎನ್ನುವ ಧಾರ್ಮಿಕ ನಡಿಗೆ ಕಾರ್ಯಕ್ರಮವು ಕಳೆದ ಎರಡು ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿದ್ದು, ನೂರಾರು ಜನರು ಪಾಲ್ಗೊಳ್ಳುತ್ತಿದ್ದಾರೆ. ಪ್ರಥಮ ದಿನವಾದ ಗುರುವಾರ ಪಟ್ಟಣದ ಗ್ರಾಮದೇವತೆ ಶ್ರೀ ದ್ಯಾಮವ್ವ ದೇವಿ ದೇವಸ್ಥಾನದಲ್ಲಿ ಗ್ರಾಮದೇವತೆಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪಟ್ಟಣದ ಶ್ರೀ ಮಳೆ ಮಲ್ಲಿಕಾರ್ಜುನ ಶಿವಾಚಾರ್ಯರು ಚಾಲನೆ ನೀಡಿದರು.

Advertisement

ಭಗವಾಧ್ವಜ ಮತ್ತು ದೇವಿಯ ಆಯುಧ ತ್ರಿಶೂಲಕ್ಕೆ ಪೂಜೆ ಸಲ್ಲಿಸಿ, ನೂರಾರು ಕಾರ್ಯಕರ್ತರ ಜೊತೆ ಮೊದಲ ದಿನದ ಧಾರ್ಮಿಕ ನಡಿಗೆಯು ನಸುಕಿನ 5.30ಕ್ಕೆ ದ್ಯಾಮವ್ವ ದೇವಿ ದೇವಸ್ಥಾನದಿಂದ ಪ್ರಾರಂಭವಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಗುರುನಾಥ ದಾನಪ್ಪನವರ, ಪ್ರಸ್ತುತ ದಿನಮಾನಗಳಲ್ಲಿ ಯುವಕರಲ್ಲಿ ಧಾರ್ಮಿಕ ಮೌಲ್ಯ ಹೆಚ್ಚಿಸುವದಷ್ಟೇ ಅಲ್ಲದೆ, ಧರ್ಮ ಜಾಗೃತಿ, ಧಾರ್ಮಿಕ ಕಲ್ಪನೆಗಳು ಉಳಿಯಬೇಕು ಎನ್ನುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ.

ಧಾರ್ಮಿಕ ನೆಲೆಗಟ್ಟಿನ ಮೇಲೆ ವೈಭವದಿಂದ ಹಬ್ಬವನ್ನು ಆಚರಿಸುವ ಉದ್ದೇಶವಿದ್ದು, ಇದರಲ್ಲಿ ಎಲ್ಲರೂ ಸಮಾನತೆಯಿಂದ ಪಾಲ್ಗೊಳ್ಳುತ್ತಿದ್ದಾರೆ. ವರ್ಷದ ದಸರಾ ಹಬ್ಬದ ಎಲ್ಲ ದಿನಗಳಲ್ಲಿಯೂ ಈ ಧಾರ್ಮಿಕ ನಡಿಗೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮದ ಶೋಭೆ ಹೆಚ್ಚಿಸಬೇಕೆಂದು ಹೇಳಿದರು.

ದಸರಾ ಉತ್ಸವ ಸಮಿತಿ ಅಧ್ಯಕ್ಷ ದೇವಪ್ಪ ಗಡೇದ, ಬಸವರಾಜ ಅರಳಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಮಿತಿ ಕಾರ್ಯದರ್ಶಿ ಮಲ್ಲನಗೌಡ ಪಾಟೀಲ, ಮಹೇಶ ಲಿಂಬಯ್ಯಸ್ವಾಮಿಮಠ, ತಿಪ್ಪಣ್ಣ ಸಂಶಿ, ನೀಲಪ್ಪ ಕರ್ಜೆಕಣ್ಣವರ, ಜ್ಞಾನೋಬಾ ಬೋಮಲೆ, ಯಲ್ಲಪ್ಪ ಕೋರದಾಳ, ರಾಜಶೇಖರ ಶಿಗ್ಲಿಮಠ, ರವಿ ಲಿಂಗಶೆಟ್ಟಿ, ರಾಜೇಶ್ವರಿ ದಾನಪ್ಪನವರ, ಸುಜಾತಾ ಅತ್ತಿಗೇರಿ, ಪುಷ್ಟಾ ಪಾಟೀಲ, ರೇಣುಕಾ ಮಾಗಡಿ, ಶಿವನಗೌಡ ಪಾಟೀಲ, ಗಂಗಾಧರ ಮೆಣಸಿನಕಾಯಿ, ಎಸ್.ಎಂ. ಶಿರುಂದ, ವೆಂಕಟೇಶ ಪಾಟೀಲ, ಬಾಬಣ್ಣ ಅಳವಂಡಿ ಮುಂತಾದವರು ಹಾಜರಿದ್ದರು.

ಶುಕ್ರವಾರ ಸಣ್ಣದ್ಯಾಮವ್ವ ದೇವಸ್ಥಾನದಿಂದ ಶ್ರೀ ಬನಶಂಕರಿ ದೇವಸ್ಥಾನದವರೆಗೆ ದುರ್ಗಾದೌಡ ಧಾರ್ಮಿಕ ನಡಿಗೆ ಮುಂದುವರೆಯಲಿದೆ ಎಂದು ಕಾರ್ಯದರ್ಶಿ ಮಲ್ಲನಗೌಡ ಪಾಟೀಲ ತಿಳಿಸಿದ್ದಾರೆ.

 


Spread the love

LEAVE A REPLY

Please enter your comment!
Please enter your name here