ದಾವಣಗೆರೆ:- ರೋಡಲ್ಲಿ ಹೋಗೋ ಹುಡುಗಿಯರನ್ನು ಚುಡಾಯಿಸೋ ಹುಡುಗರೇ ಹುಷಾರ್. ಹುಡುಗಿಯರನ್ನು ಚುಡಾಯಿಸಿದರೆ ದುರ್ಗಾಪಡೆಯಿಂದ ಕಜ್ಜಾಯ ಗ್ಯಾರಂಟಿ. ಏನಿದು ಕಜ್ಜಾಯದ ಸ್ಟೋರಿ ಅಂತೀರಾ ಈ ಸುದ್ದಿ ಒಮ್ಮೆ ಓದಿ.
ಹೌದು, ಇತ್ತೀಚೆಗೆ ನಗರದಲ್ಲಿ ಪುಂಡರ ಹಾವಳಿ ಹೆಚ್ಚಾಗಿದೆ. ಒಂಟಿಯಾಗಿ ಓಡಾಡೋದು ಹೆಣ್ಣು ಮಕ್ಕಳಿಗೆ ಕಷ್ಟವಾಗಿಬಿಟ್ಟಿದೆ. ಒಂಟಿಯಾಗಿ ಹೋಗುವ ಹೆಣ್ಣು ಮಕ್ಕಳಿಗೆ ರೇಗಿಸೋದು, ಕೆಟ್ಟದಾಗಿ ಸನ್ನೆ ಮಾಡೋದು ಇದೆಲ್ಲದರಿಂದ ಬೇಸತ್ತಿರುವ ಹುಡುಗಿಯರು ಪೊಲೀಸರಿಗೆ ವಿಷಯ ಮುಟ್ಟಿಸಿ ತಮ್ಮ ನೋವು ತೋಡಿಕೊಂಡಿದ್ದಾರೆ.
ಇದರಿಂದ ಎಚ್ಚೆತ್ತ ಪೊಲೀಸ್ ಇಲಾಖೆಯ ದುರ್ಗಾಪಡೆ ದಾವಣಗೆರೆಯಲ್ಲಿ ಫುಲ್ ಆಕ್ಟಿವ್ ಆಗಿದೆ. ರೋಡ್ ರೋಮೊಯೋಗಳಿಗೆ, ಕ್ಲಾಸ್ ಬಂಕ್ ಮಾಡಿ ಪಾರ್ಕ್ ನಲ್ಲಿದ್ದ ಯುವಕ ಯುವತಿಯರಿಗೆ ದುರ್ಗಾಪಡೆ ಕ್ಲಾಸ್ ತೆಗೆದುಕೊಂಡಿದೆ. ನಡು ರಸ್ತೆಯಲ್ಲೇ ಯುವಕ ಯುವತಿಯರಿಗೆ ದುರ್ಗಾಪಡೆ ಕ್ಲಾಸ್ ತೆಗೆದುಕೊಳ್ಳಲಾಗಿದೆ.
ದಾವಣಗೆರೆಯ ಪ್ರಮುಖ ರಸ್ತೆ ಪಾರ್ಕ್ ಗಳಲ್ಲಿ ದುರ್ಗಾಪಡೆ ಆಕ್ಟಿವ್ ಆಗಿದ್ದು, ಕಾಲೇಜ್ ಬಿಟ್ಟು ಪಾರ್ಕ್ ಗಳಲ್ಲಿ, ರೋಡ್ ಗಳಲ್ಲಿ ತಿರುಗಾಡುತ್ತಿದ್ದ ವಿದ್ಯಾರ್ಥಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ದಾವಣಗೆರೆಯಲ್ಲಿ ಯುವತಿಯರನ್ನು ಚುಡಾಯಿಸುತ್ತಿದ್ದ ಯುವಕರಿಗೆ ಪೊಲೀಸ್ ಇಲಾಖೆಯ ದುರ್ಗಾ ಪಡೆಯಿಂದ ಈ ಕ್ಲಾಸ್ ತೆಗೆದುಕೊಳ್ಳಲಾಗುತ್ತಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.