ದಸರಾ ಎಫೆಕ್ಟ್: ಮೈಸೂರು KSRTC ಬಸ್‌ ಟಿಕೆಟ್‌ ದರ ಏರಿಕೆ

0
Spread the love

ಮೈಸೂರು:-ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಸಂಭ್ರಮವು ಹೀಗಾಗಲೇ ವಿಜೃಂಭಣೆಯಿಂದ ಆರಂಭಗೊಂಡಿದೆ.

Advertisement

ಸಂಭ್ರಮ ನೋಡಲು ಕರ್ನಾಟಕದ ಮೂಲೆ ಮೂಲೆಗಳಿಂದ ಜನತೆ ಆಗಮಿಸುತ್ತಿದ್ದಾರೆ. ಈ ಹೊತ್ತಲ್ಲೇ ಕೆಎಸ್‌ಆರ್‌ಟಿಸಿ ಬಸ್‌ ಟಿಕೆಟ್ ದರ ಏರಿಕೆ ಮಾಡಿದೆ. ಬರೋಬ್ಬರಿ 20 ರೂ. ಏರಿಕೆ ಮಾಡಿದ್ದು, ಪ್ರಯಾಣಿಕರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.

ದಸರಾ ಹಬ್ಬದ ಪ್ರಯುಕ್ತ ಟಿಕೆಟ್ ದರ ಇಳಿಕೆ ಮಾಡಿ ದಸರಾ ವೀಕ್ಷಣೆಗೆ ಅವಕಾಶ ಮಾಡಿಕೊಡಬೇಕಾಗಿತ್ತು ಸರ್ಕಾರ. ಆದರೆ ಸಾರಿಗೆ ಇಲಾಖೆ ಮೈಸೂರು ಮಾರ್ಗದ ಕೆಎಸ್ ಆರ್ಟಿಸಿ ಬಸ್ ದರವನ್ನ ಏರಿಕೆ ಮಾಡಿದೆ. ಎಲ್ಲಾ ಕೆಎಸ್ ಆರ್ಟಿಸಿ ಬಸ್ ದರ ಬರೋಬ್ಬರಿ ೨೦ ರೂಪಾಯಿ ಏರಿಕೆ ಮಾಡಿದೆ. ಪ್ರಯಾಣಿಕರು ಟಿಕೆಟ್ ದರ ಏರಿಕೆ ಮಾಡಿರೋದಕ್ಕೆ ಆಕ್ರೋಶ ಹೊರ ಹಾಕ್ತಾ ಇದ್ದಾರೆ.

ಯಾವ್ಯಾವ ಬಸ್‌ ಟಿಕೆಟ್‌ ದರ ಎಷ್ಟಿದೆ?

ಕರ್ನಾಟಕ ಸಾರಿಗೆ ವೇಗದೂತ – 170 ರೂ. ನಿಂದ 190 ರೂ.ಗೆ
ತಡೆ ರಹಿತ ಸಾರಿಗೆ – 210 ರಿಂದ 240 ರೂ.
ರಾಜಾಹಂಸ – 270 ರಿಂದ 290 ರೂ.
ಐರಾವತ – 430 ರಿಂದ 450 ರೂ.
ಐರಾವತ ಕ್ಲಬ್ ಕ್ಲಾಸ್ – 440 ರಿಂದ 460 ರೂ.


Spread the love

LEAVE A REPLY

Please enter your comment!
Please enter your name here