ವಿಜಯಪುರ:- ಬಾನು ಮುಷ್ತಾಕ್ ಅವರಿಗೆ ದಸರಾ ಉತ್ಸವ ಉದ್ಘಾಟನೆಗೆ ಆಹ್ವಾನಕ್ಕೆ ವಿರೋಧ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಎಂ ಬಿ ಪಾಟೀಲ ಪ್ರತಿಕ್ರಿಯೆ ಕೊಟ್ಟಿದ್ದಾರೆ.
Advertisement
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಮುಸ್ಲಿಂ ಧರ್ಮದಲ್ಲಿ ಕುಂಕುಮ ಇಟ್ಟುಕೊಳ್ಳುವ ಪಧ್ಧತಿ ಇಲ್ಲ. ಸಾಹಿತಿಗಳ ವಿಚಾರದಲ್ಲಿ ರಾಜಕಾರಣವಾ…? ಬಾನು ಮುಷ್ತಾಕ್ ಅವರು ನನ್ನ ತಾಯಿ ನನ್ನನ್ನು ಕರೆಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ತಾಯಿಗಿಂತ ಹೆಚ್ಚು ಏನಿದೆ..? ಕುಂಕುಮದ ವಿಚಾರದಲ್ಲಿ ರಾಜಕೀಯವಾ ಅವರದ್ದು ಬರೀ ಇದೆ ಆಯಿತು ಎಂದು ಸಚಿವ ಎಂ ಬಿ ಪಾಟೀಲ ಕುಟುಕಿದ್ದಾರೆ.
ಬಾನು ಮುಷ್ತಾಕ್ ಅವರು ಚಾಮುಂಡೇಶ್ವರಿ ತಾಯಿ ಎಂದಿದ್ದಾರೆ. ನನ್ನ ತಾಯಿ ನನ್ನನ್ನು ಕರೆಸಿಕೊಂಡಿದ್ದಾಳೆ ಎಂದಿದ್ದಾರೆ. ಮಗಳಾಗಿ ನಾನು ಹೋಗುತ್ತಿದ್ದೇ ಎಂದಿದ್ದಾರೆ. ಇದರಲ್ಲಿಯೂ ರಾಜಕಾರಣವಾ…? ಬರೀ ವಿವಾದ ಮಾಡುವದೇ ಇವರ ಕೆಲಸ ಎಂದು ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ