HomeGadag Newsಡಿವೈಎಸ್‌ಪಿ ಮುರ್ತುಜಾ ಖಾದ್ರಿಯವರಿಗೆ ಸನ್ಮಾನ

ಡಿವೈಎಸ್‌ಪಿ ಮುರ್ತುಜಾ ಖಾದ್ರಿಯವರಿಗೆ ಸನ್ಮಾನ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ನೂತನ ಡಿವೈಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಿದ ಮುರ್ತುಜಾ ಖಾದ್ರಿಯವರಿಗೆ ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ಗದಗ ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಹಾಸಭಾದ ರಾಜ್ಯಾಧ್ಯಕ್ಷ ಮಹ್ಮದಶಫೀ ಎಸ್.ನಾಗರಕಟ್ಟಿ, ಗದುಗಿನ ಜನತೆ ಯಾವಾಗಲೂ ಶಾಂತಿ ಪ್ರೀಯರು. ರಾಷ್ಟçಮಟ್ಟದಲ್ಲಿ ಕೋಮುಸೌಹಾರ್ದತೆಗೆ ಹೆಸರುವಾಸಿಯಾಗಿರುವ ಗದಗ ಜಿಲ್ಲೆಗೆ ನೂತನ ಡಿವೈಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಿದ್ದು, ಸಮಸ್ತ ಗದಗ ಜನತೆಯ ಪರವಾಗಿ ಹಾಗೂ ಮುಸ್ಲಿಂ ಸಮಾಜದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಿವೈಎಸ್‌ಪಿ ಮುರ್ತುಜಾ ಖಾದ್ರಿ, ಗದಗ ಜಿಲ್ಲೆಯ ರೋಣ ತಾಲೂಕಿನವನಾಗಿರುವ ನಾನು ನನ್ನ ವಿದ್ಯಾಭ್ಯಾಸವನ್ನು ಬೀದರನಲ್ಲಿ ಮುಗಿಸಿದ್ದು, ನನಗೆ ಮತ್ತು ನಮ್ಮ ಕುಟುಂಬದವರಿಗೆ ಗದಗ ಜಿಲ್ಲೆ ಬಹಳ ಹತ್ತಿರವಾಗಿದ್ದು, ಪ್ರಾಮಾಣಿಕವಾಗಿ ಗದಗ ಜಿಲ್ಲೆಯ ಜನರ ಸೇವೆ ಮಾಡಲು ನಾನು ಸದಾ ಬದ್ಧನಾಗಿರುತ್ತೇನೆ ಎಂದರು.

ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಮತ್ತು ಗದಗ ಜಿಲ್ಲಾ ಉಸ್ತುವಾರಿ ಅಧ್ಯಕ್ಷರಾದ ಎಂ.ಡಿ. ಜಾಫರ ಢಾಲಾಂತ, ಲಾಡಸಾಬ್ ಕಿತ್ತೂರು, ಎಂ.ಎಂ ಶಿರಹಟ್ಟಿ, ಸಲೀಂ ನರಗುಂದ, ಮುಜಮಿಲ್ ಬಳ್ಳಾರಿ, ಇಲಿಯಾಸ ಶಿರಹಟ್ಟಿ, ಎಸ್.ಎಸ್. ಖಾದ್ರಿ, ಮಹಮ್ಮದ ಹನೀಫ್ ಇರಕಲ್ಲ, ಅಲ್ಲಾಭಕ್ಷ ದೊಡ್ಡಮನಿ, ಇಸಾಕ ಇರಕಲ್ಲ, ಯೂನಸ ಖಾಜಿ, ನಾಸೀರ ನರೇಗಲ್ಲ ಮತ್ತು ಗದಗ ಜಿಲ್ಲಾ ಯುವ ಘಟಕದ ಅಧ್ಯಕ್ಷ ಯಾಸೀಮ ಮುಲ್ಲಾ, ಯೂನೂಸ ಮುಲ್ಲಾ, ಅಫ್ಜಲ್ ಮನಿಯಾರ ಮುಂತಾದವರು ಉಪಸ್ಥಿತರಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!