ಗದಗ: ಉಪನ್ಯಾಸಕರೊಬ್ಬರ ಮೊಬೈಲ್‌ನ ಟೆಲಿಗ್ರಾಮ್ ಖಾತೆಗೆ ಪ್ಲೈಟ್ ಟಿಕೆಟ್ ಬುಕ್ ಮಾಡಿ ಹಣ ಗಳಿಸಬಹುದು ಅಂತ ಮೆಸೇಜ್ ಕಳುಹಿಸಿ ಸೈಬರ್ ವಂಚಕನೊಬ್ಬ ಲಕ್ಷಾಂತರ ರೂ. ವಂಚನೆ ಮಾಡಿರುವ ಘಟನೆ ನಡೆದಿದೆ.
ಗದಗ ನಗರದ ಗಂಗಿಮಡಿ ಕಾಲೋನಿ ನಿವಾಸಿ ಉಪನ್ಯಾಸಕರಾದ ತಿಮ್ಮಣ್ಣ ರಾಮಪ್ಪ ಇರಕಲ್ ಎಂಬುವರಿಗೆ ಅವರ Ashok irakall ನೇದರ ಟಿಲಿಗ್ರಾಮ್ ಖಾತೆಗೆ Click Register 2:Fill in the details and click register working website Link ; https://www.flight-networksite com/login *Please use the Invitation code: 2HZAV2 ಲಿಂಕನ್ನು ಕಳುಹಿಸಿ, ಯುಜರ್ ಐಡಿ ಕ್ರಿಯೆಟ್ ಮಾಡಿಸಿಕೊಂಡು ಟಾಸ್ಕ್‌ಗಳನ್ನು ಕೊಟ್ಟು ಟಾಸ್ಕ್‌ಗಳನ್ನು ಕಂಪ್ಲೀಟ್ ಮಾಡಲು ಹೇಳಿ ಹಂತ ಹಂತವಾಗಿ ಒಟ್ಟು 8,40,812/- ಹಣವನ್ನು ಹಾಕಿಸಿಕೊಂಡು ಅದರಲ್ಲಿ ಫಿರ್ಯಾದಿ ತಿಮ್ಮಣ್ಣ ಇರಕಲ್ ಅವರಿಗೆ 79,600 ಮರಳಿ ಜಮೆ ಮಾಡಿ , ಉಳಿದ 7,61,212ರೂ,ಗಳನ್ನು ಕೊಡದೆ ಮೋಸ ಮಾಡಲಾಗಿದೆ ಎಂದು
ಗದಗ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
0088/2023-INFORMATION TECHNOLOGY ACT 2008(u/s-66(d),66(c)) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.