HomeLife Styleಹಲಸಿನ ಹಣ್ಣು ತಿಂದು ಬೀಜ ಎಸೆಯದಿರಿ: ಬೀಜದಿಂದಾಗುವ ಆರೋಗ್ಯ ಲಾಭಗಳು ಹಲವು!

ಹಲಸಿನ ಹಣ್ಣು ತಿಂದು ಬೀಜ ಎಸೆಯದಿರಿ: ಬೀಜದಿಂದಾಗುವ ಆರೋಗ್ಯ ಲಾಭಗಳು ಹಲವು!

For Dai;y Updates Join Our whatsapp Group

Spread the love

ಹಲಸಿನ ಹಣ್ಣು ಕೇವಲ ಮೇಲೆ ನೋಡಲು ಮಾತ್ರ ಒರಟು, ಮುಳ್ಳು ಮುಳ್ಳು. ಆದರೆ ಒಳಗಿನ ಪ್ರತಿಯೊಂದು ಭಾಗವೂ (ಹಲಸಿನ ತೊಳೆ ಮತ್ತು ಹಲಸಿನ ಬೀಜಗಳು) ನಮಗೆ ಉಪಯೋಗಕ್ಕೆ ಬರುತ್ತವೆ. ಹಲಸಿನ ಹಣ್ಣಿನ ತೊಳೆಗಳನ್ನು ತಿಂದು ಸಿಹಿಯ ರುಚಿ ಅನುಭವಿಸಿದರೆ, ಅದರ ಬೀಜಗಳಿಂದ ಸಾರು, ಪಲ್ಯ ಹೀಗೆ ನಾನಾ ರೀತಿಯ ತರವೇರಿ ಭಕ್ಷ್ಯಗಳನ್ನು ತಯಾರಿಸಬಹುದು.

ಹೌದು, ಹಲಸಿನ ಹಣ್ಣು ತಿಂದು ಬೀಜ ಬೇಡವೆಂದು ಎಸೆಯುತ್ತಾರೆ. ಕಾರಣ ಅದರ ಉಪಯೋಗದ ಬಗ್ಗೆ ತಿಳಿದಿಲ್ಲ. ಎಸೆಯಲು ಹೊರಟಿರುವ ಹಲಸಿನ ಬೀಜದಿಂದ ಹೆಚ್ಚು ಉಪಯೋಗವಿದೆ. ಅವುಗಳಿಂದಲೂ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗಾದರೆ ಅದರ ಪ್ರಯೋಜನಗಳೇನು? ಎಂಬುದನ್ನು ಇಲ್ಲಿ  ತಿಳಿಸಲಾಗಿದೆ.

ಕೂದಲು ಉದ್ದವಾಗಿ ಬೆಳೆಯುತ್ತದೆ ಹೆಣ್ಣು ಮಕ್ಕಳು ಲಕ್ಷಣವಾಗಿ ಕಾಣವುದು ಉದ್ದವಾದ ಕೂದಲಿಂದ. ಕೂದಲು ದಟ್ಟವಾಗಿ, ಉದ್ದವಾಗಿ ಬೆಳೆಯಲು ಮಾಡುವ ಪ್ರಯತ್ನಗಳು ಒಂದೆರಡಲ್ಲ. ಯಾರೇ ಏನೇ ಹೇಳಿದರೂ ಆ ಪ್ರಯೋಗವನ್ನು ಮಹಿಳೆಯರು ಮಾಡಲೇಬೇಕು. ಯಾಕೆಂದರೆ ಹುಡುಗಿಯರು ಕೂದಲಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಆದರೂ ಕೆಲವೊಮ್ಮೆ ಕೆಲಸದ ಒತ್ತಡ, ಕಿರಿ ಕಿರಿಯಿಂದ ಕೂದಲು ಆರೈಕೆ ಮಾಡಲು ಆಗುವುದಿಲ್ಲ. ಬುಡ ಸಮೇತ ಉದುರವ ಕೂದಲನ್ನು ನೋಡಿ ಭಯಗೊಳ್ಳುವ ಹೆಣ್ಣು ಮಕ್ಕಳ ನೆರವಿಗೆ ಹಲಿಸನ ಬೀಜವಿದೆ. ಹಲಸಿನ ಬೀಜಗಳಲ್ಲಿ ಕಬ್ಬಿಣದ ಅಂಶ ಇರುವುದರಿಂದ ಕೂದಲಿನ ಸಮಸ್ಯೆಗಳನ್ನು ನಿವಾರಿಸುತ್ತದೆ. ದೇಹದ ರಕ್ತ ಸಂಚಾರ ಸರಾಗವಾಗಿ ಆಗುವುದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ.

ಚರ್ಮದ ಸುಕ್ಕು ಕಡಿಮೆಯಾಗುತ್ತದೆ ನನಗೆ ವಯಸ್ಸಾಗಿದೆ ಎಂದು ಯಾರು ಹೇಳಿಕೊಳ್ಳುತ್ತಾರೆ ಹೇಳಿ. ಎಲ್ಲರೂ ಯಂಗ್ ಆ್ಯಂಡ್ ಎನರ್ಜಿಟಿಕ್ ಆಗಿ ಕಾಣಬೇಕಂತಲೇ ಯೋಚಿಸುತ್ತಾರೆ. ಮುಖದ ಮೇಲೆ ಸುಕ್ಕು ಕಂಡುಬಂದಾಗ ಚೆನ್ನಾಗಿ ಕಾಣಲ್ಲ ಅಂತ ಸಿಕ್ಕ ಸಿಕ್ಕ ಕ್ರೀಂ ಗಳನೆಲ್ಲಾ ಹಚ್ಚುತ್ತಾರೆ. ಅದೇನೆ ಇರಲಿ.. ಹಲಸಿನ ಹಣ್ಣಿನ ಬೀಜ ಕೂಡಾ ಮುಖದ ಸುಕ್ಕನ್ನು ನಿವಾರಣೆ ಮಾಡುತ್ತದೆ. ಹಲಸಿನ ಬೀಜವನ್ನು ಪುಡಿ ಮಾಡಿ ತಣ್ಣನೆಯ ಹಾಲಿನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿಕೊಂಡರೆ ಮುಖದ ಸುಕ್ಕು ನಿವಾರಣೆಯಾಗುವುದು. ಈ ಪ್ರಯೋಗವನ್ನು ಸುಮಾರು 15 ರಿಂದ 20 ದಿನಗಳು ಮಾಡಿದರೆ ಉತ್ತಮ ಫಲಿತಾಂಶ ದೊರಕುತ್ತದೆ.

ಲೈಂಗಿಕತೆ ಉತ್ತಮವಾಗಿರುತ್ತದೆ ಮನುಷ್ಯನಿಗೆ ನೀರು, ಆಹಾರ, ನಿದ್ರೆ ಎಷ್ಟು ಮುಖ್ಯವೋ ಅಷ್ಟೇ ಲೈಂಗಿಕತೆಯು ಅಷ್ಟೇ ಮುಖ್ಯವಾಗಿದೆ. ಈ ಲೈಂಗಿಕತೆಯನ್ನು ಮೂಲಭೂತ ಬೇಡಿಕೆಯೆಂದು ಪರಿಗಣಿಸಲಾಗಿದೆ. ಬದುಕಲ್ಲಿ ಲೈಂಗಿಕತೆ ತೃಪ್ತಿಯಾಗದಿದ್ದರೆ ಆ ವ್ಯಕ್ತಿ ಬದುಕಲ್ಲಿ ಒಂದಲ್ಲ ಒಂದು ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಹೀಗಾಗಿ ಲೈಂಗಿಕ ತೃಪ್ತಿ ಮುಖ್ಯವಾಗಿದೆ. ಆದರೆ ಬ್ಯುಸಿ ಲೈಫಿನ ಜನರಿಗೆ ಲೈಂಗಿಕ ಆಸಕ್ತಿ ಕಡಿಮೆಯಾಗಿರುತ್ತದೆ. ಅಂತವರಿಗೆ ಈ ಹಲಸಿನ ಹಣ್ಣಿನ ಬೀಜ ಸಹಾಯಕವಾಗಿದೆ.

ಉತ್ತಮ ಜೀರ್ಣಕ್ರಿಯೆ ಜೀರ್ಣಕ್ರಿಯೆ ಸರಿಯಾಗದೆ ಇದ್ದಾಗ ದೇಹದ ಸಮತೋಲನ ಹದಗೆಡುತ್ತದೆ. ಮನಸ್ಸಿಗೆ ಕಿರಿಕಿರಿಯಾಗುವ ಜೊತೆಗೆ ದೇಹ ಭಾರವಾದಂತೆ ಭಾಸವಾಗುತ್ತದೆ. ಹೀಗಾಗಿ ಜೀರ್ಣಕ್ರಿಯೆಯಾಗಲು ಹರಸಾಹಸಡುತ್ತಾರೆ. ಈ ಜೀರ್ಣಕ್ರಿಯೆಗೆ ಹಲಸಿನ ಬೀಜ ಹೆಚ್ಚು ಸಹಾಯಕವಾಗಿದೆ. ಇದನ್ನು ಸ್ವತಃ ತಜ್ಞರು ಕೂಡಾ ತಿಳಿಸಿದ್ದಾರೆ. ಅಜೀರ್ಣದಿಂದ ಒದ್ದಾಡುವರಿಗೆ ಹಲಸಿನ ಬೀಜಗಳು ರಾಮಬಾಣದಂತೆ ಕಾರ್ಯನಿರ್ವಹಿಸುತ್ತದೆ. ಹಲಸಿನ ಬೀಜಗಳನ್ನು ಬೇಯಿಸಿ ತಿಂದಾಗ ಉತ್ತಮವಾಗಿ ಜೀರ್ಣಕ್ರಿಯೆ ಆಗುತ್ತದೆ.

ಕಣ್ಣಿನ ಸಮಸ್ಯೆ ನಿವಾರಿಸುವುದು ಈಗೀಗಂತೂ 10 ವರ್ಷ ದಾಟುತಿದ್ದಂತೆ ಎರಡು ಕಣ್ಣಿಗೆ ಕನ್ನಡಕ ಬಂದುಬಿದ್ದಿರುತ್ತದೆ. ಹೆಚ್ಚಾಗಿ ಟಿವಿ, ಮೊಬೈಲ್, ಕಂಪ್ಯೂಟರ್ ನೋಡುವುದರಿಂದ ಕಣ್ಣಿನ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಇದರಿಂದ ಕಣ್ಣಿನ ಹಲವಾರು ಸಮಸ್ಯೆಗಳು ಹುಟ್ಟುಕೊಳ್ಳುತ್ತದೆ. ಹೀಗಾಗಿ ಕಣ್ಣಿನ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇದಕ್ಕೆ ಹಲಸಿನ ಬೀಜವೂ ಸಹಕಾರಿಯಾಗಿದೆ. ಹಲಸಿನ ಬೀಜದಲ್ಲಿ ವಿಟಮಿನ್ ಎ ಇರುವುದರಿಂದ ಕಣ್ಣಿನ ತೊಂದರೆಗಳನ್ನು ನಿವಾರಿಸುತ್ತದೆ. ಅದರಲ್ಲೂ ಮುಖ್ಯವಾಗಿ ಇರುಳುಗಣ್ಣು ತೊಂದರೆಗೆ ಇದು ಉತ್ತಮವಾಗಿದೆ.

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!