ನಾವು ತಿನ್ನುವ ಆಹಾರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇಂದಿನ ವೇಗದ ಜಗತ್ತಿನಲ್ಲಿ ಎಲ್ಲವೂ ತುಂಬಾ ಆತುರವಾಗಿ ಕಾಣುತ್ತದೆ. ನಾವು ನಮ್ಮ ಕೆಲಸ ಕಾರ್ಯಗಳ ಮಧ್ಯ ಕಳೆದುಹೋಗುತ್ತೇವೆ ಆದ್ದರಿಂದ ಊಟ ಮಾಡಲು ಟೈಮ್ ಸಿಗುವುದಿಲ್ಲ. ಆದ್ದರಿಂದ ನಾವು ಊಟ ತಿಂಡಿಯನ್ನು ಬೇಗನೆ ತಿಂದು ಮುಗಿಸುತ್ತೇವೆ. ಇದು ಪ್ರಾಯೋಗಿಕವೆಂದು ತೋರುತ್ತದೆ, ಆದರೆ ಅದು ನಿಮ್ಮ ದೇಹದ ಮೇಲೆ ಅನಿರೀಕ್ಷಿತ ಪರಿಣಾಮಗಳನ್ನು ಬೀರಬಹುದು.
ನಮ್ಮ ಹಿರಿಯರು ನಮ್ಮ ಆಹಾರ ಪದ್ಧತಿಯ ಬಗ್ಗೆ ಸುಮ್ಮನೆ ಹೇಳಿಲ್ಲ. ಅದು ನಮ್ಮ ಮೇಲೆ ಉಂಟು ಮಾಡುವ ಪರಿಣಾಮಗಳ ಬಗ್ಗೆಯೂ ಹೇಳಿದ್ದಾರೆ. ಆಹಾರ ಪದ್ಧತಿಗಳನ್ನು ನಮ್ಮ ಆರೋಗ್ಯಕ್ಕೆ ಹಾಗೂ ಜೀವಿತಾಧಿಗೆ ಹೆಚ್ಚು ಮುಖ್ಯವಾಗಿರುತ್ತದೆ. ಆಹಾರದ ಸೇವನೆ ಮಾಡುವಾಗ ಇರುವ ನಿಯಮಗಳೇನು? ಅವುಗಳನ್ನು ನಾವು ಪಾಲನೆ ಮಾಡುತ್ತಿದ್ದೇವಾ? ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಅವ್ಯವಸ್ಥೆಯುತವಾಗಿರುವ ನಮ್ಮ ಜೀವನಶೈಲಿಯಿಂದ ಆಹಾರ ಪದ್ದತಿ ಹಾಗೂ ಸೇವನೆ ಬಗ್ಗೆ ಕಾಳಜಿಯೇ ಇಲ್ಲ. ಅದಕ್ಕೆ ಹೇಳುವುದು ನಮ್ಮ ಮನೆಗಳಲ್ಲಿ ಒಬ್ಬರು ಹಿರಿಯರು ಇರಬೇಕು ಎನ್ನುವುದು. ಅವರು ನಮಗೆ ಈ ಬಗ್ಗೆ ಎಲ್ಲವನ್ನು ಹೇಳಿಕೊಡುತ್ತಾರೆ.
ಈ ಆರೋಗ್ಯ , ಆಚರಣೆ, ನಂಬಿಕೆ, ಜೀವನಶೈಲಿಯಲ್ಲಿ ಹಿರಿಯರ ಮಾತು ಉತ್ತಮ. ಅವರಿಗೆ ನಮ್ಮ ಆಹಾರದ ಬಗ್ಗೆ, ಆಹಾರ ಕ್ರಮದ ಬಗ್ಗೆ ಎಲ್ಲವೂ ಗೊತ್ತಿರುತ್ತದೆ. ಆಹಾರ ಕ್ರಮಗಳನ್ನು ನಮ್ಮ ಜೀವನಕ್ಕೆ ಎಷ್ಟು ಮುಖ್ಯ ಎನ್ನುವುದು. ಅನೇಕ ಘಟನೆಗಳು ವಿವರಿಸುತ್ತದೆ. ಚಿಕ್ಕ ವಯಸ್ಸಿನಲ್ಲಿ ಹೃದಯಾಘಾತ, ಕೊಬ್ಬು, ಇನ್ನು ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ನಮ್ಮ ಸೋಮಾರಿತನಕ್ಕೆ ಈ ಆಹಾರ ಕ್ರಮ ಕೂಡ ಕಾರಣವಾಗಿದೆ. ನಮ್ಮ ಈ ಬ್ಯೂಸಿ ಶೆಡ್ಯೂಲ್ನಲ್ಲಿ ಎಲ್ಲದರಲ್ಲೂ ಆತುರತೆ ಇರುತ್ತದೆ. ಅದರಲ್ಲೂ ಊಟದ ವಿಷಯದಲ್ಲಿ ತುಂಬಾ ಗಬಗಬನೆ ತಿನ್ನುತ್ತೇವೆ. ಇದನ್ನು ಹಿರಿಯರು ವಿರೋಧಿಸುತ್ತಾರೆ. ಇದು ಸರಿಯಾದ ಆಹಾರ ಪದ್ಧತಿಯಲ್ಲ ಎಂಬುದು ಅವರ ವಾದವಾಗಿದೆ.
ಆಹಾರವು ಆರೋಗ್ಯಕ್ಕೂ ಮನಸ್ಸಿಗೂ ಸಂಬಂಧಿಸಿದೆ. ಅದಕ್ಕಾಗಿಯೇ ನಮ್ಮ ಆಲೋಚನೆಗಳು ನಮ್ಮ ಆಹಾರಕ್ರಮಕ್ಕೆ ಅನುಗುಣವಾಗಿರುತ್ತವೆ. ಆಹಾರ ಮತ್ತು ಮನಸ್ಸಿನ ಸರಿಯಾದ ಸಂಯೋಜನೆಯಿಂದ ಮಾತ್ರ ಸಕಾರಾತ್ಮಕತೆ ಬರುತ್ತದೆ. ಬೇಗ ಊಟ ಮಾಡುವುದರಿಂದ ಆಹಾರ ವ್ಯರ್ಥವಾಗುತ್ತದೆ. ಅಂತಹ ಆಹಾರವು ಹೊಟ್ಟೆಯಲ್ಲಿ ಜೀರ್ಣವಾಗುವುದಿಲ್ಲ. ಆಹಾರವನ್ನು ಹಿಂದೂ ಧರ್ಮದಲ್ಲಿ ಬ್ರಹ್ಮ ಎಂದು ಹೇಳಲಾಗುತ್ತದೆ. ಒಂದು ವೇಳೆ ಇಂತಹ ಪದ್ಧತಿಯನ್ನು ನಾವು ಪಾಲಿಸಿದ್ರೆ, ಅದು ನಮಗೆ ಶಾಪ ಹಾಗೂ ಅನ್ನಪೂರ್ಣ ದೇವಿಗೆ ಮಾಡುವ ಅವಮಾನ. ಹಿಂದೂ ಧರ್ಮದಲ್ಲಿ, ಆಹಾರವನ್ನು ತಯಾರಿಸುವ ಪ್ರಕ್ರಿಯೆಯು ಪೂಜೆಯಂತೆ. ಆದ್ದರಿಂದ, ಆಹಾರವನ್ನು ಶುದ್ಧ ಮನಸ್ಸಿನಿಂದ ಮತ್ತು ಒಳ್ಳೆಯ ಭಾವನೆಗಳಿಂದ ಸೇವಿಸಬೇಕು.
ತುಂಬಾ ವೇಗವಾಗಿ ಊಟ ಮಾಡುವುದು ಒಳ್ಳೆಯದಲ್ಲ. ಇದು ನಿಮ್ಮ ಅನಾರೋಗ್ಯಕ್ಕೂ ಕಾರಣವಾಗಬಹುದು. ಆರೋಗ್ಯ ತಜ್ಞರ ಪ್ರಕಾರ, ತುಂಬಾ ವೇಗವಾಗಿ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ ಎನ್ನಲಾಗಿದೆ.



