HomeKarnataka NewsED ಸಾಂವಿಧಾನಿಕ ಸಂಸ್ಥೆ ಅಲ್ಲ, BJP ಅಂಗಸಂಸ್ಥೆ. ರಾಜಕೀಯ ಕಾರಣಗಳಿಗೆ ದಾಳಿಯಾಗಿದೆ: ಬಿ.ಕೆ ಹರಿಪ್ರಸಾದ್

ED ಸಾಂವಿಧಾನಿಕ ಸಂಸ್ಥೆ ಅಲ್ಲ, BJP ಅಂಗಸಂಸ್ಥೆ. ರಾಜಕೀಯ ಕಾರಣಗಳಿಗೆ ದಾಳಿಯಾಗಿದೆ: ಬಿ.ಕೆ ಹರಿಪ್ರಸಾದ್

For Dai;y Updates Join Our whatsapp Group

Spread the love

ನವದೆಹಲಿ: ಬಳ್ಳಾರಿಯ ಮೂವರು ಶಾಸಕರು, ಓರ್ವ ಸಂಸದನಿಗೆ ಇ.ಡಿ ಬೆಳ್ಳಂಬೆಳಗ್ಗೆ ಶಾಕ್ ನೀಡಿದೆ. ವಾಲ್ಮೀಕಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ದಾಳಿ ಮಾಡಲಾಗಿದೆ. ಇನ್ನೂ   ಈ ವಿಚಾರವಾಗಿ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಪ್ರತಿಕ್ರಿಯೇ ನೀಡಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ಅವರು ವಾಲ್ಮಿಕಿ ಹಗರಣದಲ್ಲಿ ತಪ್ಪಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಆದರೆ ಸಚಿವರ ಪಾತ್ರ ಇಲ್ಲ ಎಂದು ಸಾಬೀತಾಗಿದೆ. ಇಡಿ ಸಾಂವಿಧಾನಿಕ ಸಂಸ್ಥೆ ಅಲ್ಲ, ಬಿಜೆಪಿ ಅಂಗಸಂಸ್ಥೆ. ರಾಜಕೀಯ ಕಾರಣಗಳಿಗೆ ದಾಳಿಯಾಗಿದೆ ಎಂದು ಆರೋಪಿಸಿದ್ದಾರೆ.

ಜಾತಿ ಮರು ಸಮೀಕ್ಷೆಗೆ ಹೈಕಮಾಂಡ್ ಸೂಚನೆ ನೀಡಿದ ಬಗ್ಗೆ ಮಾತನಾಡಿದ ಅವರು, ಈಗ ಮಾಡಿರುವ ವರದಿ ಹಳೆಯದಾಗಿದೆ. ಜಯ ಪ್ರಕಾಶ್ ಹೆಗಡೆ ವರದಿ ಅವೈಜ್ಞಾನಿಕ ಎಂದರು. ಆದರೆ ಹೇಗೆ ಎಂದು ಯಾರು ಹೇಳಿಲ್ಲ. ಮುಂದಿನ ದಿನಗಳಲ್ಲಿ ಹೇಗೆ ಸಮೀಕ್ಷೆ ಬರುತ್ತೆ ಎಂದು ಜನರು ಎದುರು ನೋಡುತ್ತಿದ್ದಾರೆ.

ಇಂತಹದೇ ಆರೋಪಗಳು ಮುಂದೆಯೂ ಬರಬಹುದು. ಅವೈಜ್ಞಾನಿಕ ಏನು ಎಂಬುದು ಸ್ಪಷ್ಟಪಡಿಸಬೇಕು, ಅದನ್ನು ಸರಿಪಡಿಸಿಕೊಂಡು ಮತ್ತೊಮ್ಮೆ ಸಮೀಕ್ಷೆ ಮಾಡಬೇಕು. ತೆಲಂಗಾಣದಲ್ಲಿ ಸಮೀಕ್ಷೆ ಮಾಡಿ ತೋರಿಸಿದೆ, ಇಲ್ಲೂ ಮಾಡುತ್ತೇವೆ. ಈಗಾಗಲೇ ಸಮೀಕ್ಷೆಯಿಂದ 187 ಕೊಟಿ ನಷ್ಟವಾಗಬಹುದು, ಮುಂದೆ ಹೀಗೆ ಆಗಬಾರದು. ಬಲಾಢ್ಯರಿಗೆ ಮಾತ್ರ ಅನುಕೂಲವಾಗಬಾರದು. ಹಿಂದುಳಿದ ಜನರಿಗೂ ಸಂವಿಧಾನದ ಆಶಯ ತಲುಪಬೇಕು ಎಂದು ಹೇಳಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!