ಬೆಂಗಳೂರು:- ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಪತ್ನಿ ಪಾರ್ವತಿಗೆ ಇಡಿ ನೋಟಿಸ್ ಕೊಟ್ಟಿರುವುದು ರಾಜಕೀಯ ಅನ್ನೋಕ್ಕಾಗಲ್ಲ ಇದಕ್ಕೆ ಉತ್ತರ ಕೊಡಲಿ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಸಿಎಂ ಪತ್ನಿ, ಬೈರತಿ ಸುರೇಶ್ ಅವರಿಗೆ ಇಡಿ ನೋಟಿಸ್ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪಾರ್ವತಿ ಸಿದ್ದರಾಮಯ್ಯ ಅವರಿಗೆ ಇಡಿ ನೋಟಿಸ್ ನೀಡಿರುವುದು ಎಲ್ಲ ಬಾರಿಯೂ ರಾಜಕೀಯ ಎನ್ನಲು ಸಾಧ್ಯವಿಲ್ಲ. ನೋಟಿಸ್ ಕೊಟ್ಟಿದ್ದಾರೆ ಅವರು ಉತ್ತರ ಕೊಡಲಿ. ಎಲ್ಲವನ್ನೂ ನಾವು ರಾಜಕೀಯವಾಗಿ ನೋಡಬಾರದು. ನೋಟಿಸ್‌ಗೆ ಅಷ್ಟೊಂದು ಮಹತ್ವ ಕೊಡಬೇಕಿಲ್ಲ. ಪ್ರತಿಕ್ರಿಯಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ನಾನು ಆ ಡಿಪಾರ್ಟ್ಮೆಂಟ್ ಹೆಡ್ ಅಲ್ಲ. ನೋಟಿಸ್ ಕೊಟ್ಟಿದ್ದಾರೆ. ಉತ್ತರ ಕೊಡಬೇಕು ಅಷ್ಟೇ ಎಂದರು.
ಸಿದ್ದರಾಮಯ್ಯ 5 ವರ್ಷ ಸಿಎಂ ಎಂಬ ಜಮೀರ್ ಹೇಳಿಕೆ ವಿಚಾರವಾಗಿ ಮಾತನಾಡಿ, ಇದಕ್ಕೆ ನಾನೇನು ಉತ್ತರ ಕೊಡಲಿ. ನಾನು ಹೈಕಮಾಂಡ್ ಅಲ್ಲ. ಅದೇನು ಪ್ರಯೋಜನ ಇಲ್ಲ, ಎಲ್ಲ ಅವರವರ ಸ್ಥಾನದಲ್ಲಿ ಇದ್ದಾರೆ. ನಮ್ಮ ಡಿಮಾಂಡ್‌ನ್ನು ಪ್ರತಿದಿನ ಹೇಳಬೇಕು ಅಂತಿಲ್ಲ. ಒಂದು ಸಲ ಹೇಳಿದ್ರೆ ಸಾಕು. ಅದು ಹೈಕಮಾಂಡ್‌ಗೆ ಇರಸುಮುರುಸು ಆಗಿದೆ. ಅದಕ್ಕೆ ಹೈಕಮಾಂಡ್ ಹೇಳಿರಬೇಕು. ಈಗ ಚರ್ಚೆ ನಡೆಯುತ್ತಿಲ್ಲ, ಅದೆಲ್ಲ ಅನಾವಶ್ಯಕ ಎಂದರು.