ಬೆಂಗಳೂರು: ಕಾಂಗ್ರೆಸ್ ನಾಯಕಿ ಕುಸುಮ ಹನುಮಂತರಾಯಪ್ಪಗೆ ಇಡಿ ಅಧಿಕಾರಿಗಳು ಬಿಗ್ ಶಾಕ್ ಕೊಟ್ಟಿದ್ದಾರೆ. ಬೆಂಗಳೂರಿನ ಮುದ್ದಿಪಾಳ್ಯ ರಸ್ತೆಯಲ್ಲಿ ಇರುವ ನಿವಾಸದ ಮೇಲೆ ದಾಳಿ ನಡೆಸಿದ್ದು, ಎಂಎಲ್ ಎ ವೀರಂದ್ರ ಪಪ್ಪಿ ಮೇಲೆ ನಡೆದಿರುವ ದಾಳಿಯ ಮುಂದುವರೆದ ಭಾಗವಾಗಿ ದಾಳಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.
Advertisement
ಕೇಂದ್ರದ ಭದ್ರತಾ ಪಡೆಯಿಂದ ಭದ್ರತೆ ಪಡೆದಿರುವ ಇಡಿ ಅಧಿಕಾರಿಗಳುಬೆಳಿಗ್ಗೆ ನಾಲ್ಕು ವರೆ ಸುಮಾರಿಗೆ ಎರಡು ಇನ್ನೋವಾ ಕಾರಿನಲ್ಲಿ ಆಗಮಿಸಿದ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಹನುಮಂತರಾಯಪ್ಪ ಪುತ್ರ ಹಾಗೂ ಶಾಸಕ ವೀರೇಂದ್ರ ಪಪ್ಪಿ ಅವರ ವ್ಯವಹಾರ ಸಂಬಂಧಿತ ಮಾಹಿತಿ ಹಿನ್ನೆಲೆ ದಾಳಿ ನಡೆದಿರುವುದು ತಿಳಿದು ಬಂದಿದೆ. ಸದ್ಯ ಹನುಮಂತರಾಯಪ್ಪ ನಿವಾಸದಲ್ಲಿ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.