HomeGadag Newsಮಹಿಳೆಗೆ ವಿದ್ಯೆ, ಜ್ಞಾನ ಅತ್ಯವಶ್ಯ: ಉಷಾ ಹೆಗಡೆ

ಮಹಿಳೆಗೆ ವಿದ್ಯೆ, ಜ್ಞಾನ ಅತ್ಯವಶ್ಯ: ಉಷಾ ಹೆಗಡೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಇಂದಿನ ದಿನಗಳಲ್ಲಿ ಒಬ್ಬ ಮಹಿಳೆ ತಾನು ಬಯಸಿದ್ದನ್ನು ಸಾಧಿಸುವ ಛಲ ಮತ್ತು ಬುದ್ಧಿಶಕ್ತಿಯನ್ನು ಹೊಂದಿದ್ದಾಳೆ. ಮಗುವಿಗೆ ತಾಯಿಯ ಆರೈಕೆಯೂ ಅಮೂಲ್ಯವಾಗಿರುತ್ತದೆ. ಮಹಿಳೆ ಆತ್ಮ ಸಂರಕ್ಷಣೆ ಮಾಡಿಕೊಳ್ಳಬೇಕಾಗುತ್ತದೆ. ನಮ್ಮ ಉನ್ನತ್ತಿಯಿಂದ ನಮ್ಮಲ್ಲಿ ಪರಿವರ್ತನೆ ಆಗುತ್ತದೆ. ಆದ್ದರಿಂದ ಮಹಿಳೆಯರಿಗೆ ವಿದ್ಯೆ ಮತ್ತು ಜ್ಞಾನದ ಅವಶ್ಯಕತೆ ಇದೆ ಎಂದು ಹುಬ್ಬಳ್ಳ್ಳಿಯ ನಂದು ಕೆಮಿಕಲ್ ಇಂಡಸ್ಟ್ರೀಸ್ ನಿರ್ದೇಶಕರಾದ ಉಷಾ ಹೆಗಡೆ ಅಭಿಪ್ರಾಯಪಟ್ಟರು.

ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಮಹಿಳಾ ಘಟಕದಿಂದ ನಗರದ ಶ್ರೀ ಜಗದ್ಗುರು ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ ಮಣಕವಾಡದ ಅನ್ನದಾನೀಶ್ವರ ದೇವಮಂದಿರ ಮಹಾಮಠದ ಪರಮ ಪೂಜ್ಯ ಶ್ರೀ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಮಹಿಳೆಯರು ಎಲ್ಲವನ್ನು ಸರಿದೂಗಿಸಿಕೊಂಡು ಹೋಗುವ ಶಕ್ತಿಯನ್ನು ಹೊಂದಿದ್ದಾರೆ. ಮಕ್ಕಳ ಭವಿಷ್ಯವನ್ನು ರೂಪಿಸುವುದು ತಾಯಂದಿರ ಆದ್ಯ ಕರ್ತವ್ಯವಾಗಿದೆ. ತಾಯಂದಿರು ಮೊಬೈಲ್ ಬಗ್ಗೆ ಮಹತ್ವ ಕೊಡದೇ ಮಕ್ಕಳ ಜೀವನವನ್ನು ರೂಪಿಸಬೇಕೆಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷರಾದ ತಾತನಗೌಡ ಎಸ್.ಪಾಟೀಲ, ಅಧ್ಯಕ್ಷತೆ ವಹಿಸಿದ್ದ ಮಹಿಳಾ ಘಟಕದ ಅಧ್ಯಕ್ಷರಾದ ನಂದಾ ಚಂದ್ರು ಬಾಳಿಹಳ್ಳಿಮಠ ಮಾತನಾಡಿದರು.

ಕಾರ್ಯಕ್ರಮದ ಸಹ ಪ್ರಾಯೋಜಕತ್ವವನ್ನು ಸದಾಶಿವ್ಯಯ ಎಸ್.ಮದರಿಮಠ, ಪೂಜಾ ಭೂಮಾ, ರೇಖಾ ಚನ್ನಪ್ಪನವರ, ಸುವರ್ಣಾ ಸದಾಶಿವಯ್ಯ ಮದರಿಮಠ, ಉಮಾ ಮುನವಳ್ಳಿ, ಸುಜಾತಾ ಗುಡಿಮನಿ, ವನಜಾಕ್ಷಿ ಕೂಗು, ಲಲಿತಾ ತಡಸದ, ಭಾರತಿ ಮುದಗಲ್, ಅನಿತಾ ಗೊಡಚಿ, ಸುನೀತಾ ಗೊಡಚಿ, ಸೌಭಾಗ್ಯ ಮಹಿಳಾ ಸೌಹಾರ್ದ ಸಹಕಾರಿ ಬ್ಯಾಂಕ್, ದಿ. ಮರ್ಚಂಟ್ಸ್ ಅರ್ಬನ್ ಕೋ-ಆಪ್ ಬ್ಯಾಂಕ್, ಸುರೇಖಾ ಮಲ್ಲಾಡದ ಸೀಮಾ ಜೈನ್, ರಾಜೇಶ್ವರಿ ಪವಾರ, ಭಾಗ್ಯಶ್ರೀ ಕುರಡಗಿ, ಶ್ವೇತಾ ಖಟವಟೆ, ಆರತಿ ಭಾಂಡಗೆ, ಸಂಧ್ಯಾ ಭಾಂಡಗೆ ಪೂರ್ಣಿಮಾ ಪಾಟೀಲ, ರೇಶ್ಮಾ ಭಾರತ, ಕಸ್ತೂರಿ ತೆಲೆಗೌಡ್ರ, ಅತ್ತರಬಾನು ತಾಡಪತ್ರಿ, ಮದುಶ್ರೀ ಭದ್ರಕಾಳಮಮಠ, ಗಾಯತ್ರಿ ಭಾಂಡಗೆ, ಜ್ಯೋತಿ ಹಬೀಬ, ಸುನೀತಾ ಪಾಟೀಲ ಇವರು ವಹಿಸಿಕೊಂಡಿದ್ದರು.

ಕ್ಷಿತಿ ಸುಲಾಖೆ ಭಕ್ತಿ ಗೀತೆ ಹಾಡಿದರೆ, ಪ್ರೀತಿ ಪ್ರಾರ್ಥನೆಯನ್ನು ಮಾಡಿದರು. ನಂದಾ ಚಂದ್ರು ಬಾಳಿಹಳ್ಳಿಮಠ ಸ್ವಾಗತಿಸಿದರು. ಜ್ಯೋತಿ ಹೇರಲಗಿ ಕಾರ್ಯಕ್ರಮ ನಿರೂಪಿಸಿದರು. ಜ್ಯೋತಿ ರಾಮನಗೌಡ ದಾನಪ್ಪಗೌಡ ವಂದಿಸಿದರು.

ಸAಸ್ಥೆಯ ಮಹಿಳಾ ಘಟಕದ ಉಪಾಧ್ಯಕ್ಷರಾದ ದೀಪಾ ಗದಗ, ಸುಷ್ಮಾ ಜಾಲಿ, ಸುಜಾತಾ ಗುಡಿಮನಿ, ಲಲಿತಾ ತಡಸದ, ಸುಧಾ ಹುಣಸಿಕಟ್ಟಿ, ಪೂರ್ಣಿಮಾ ಆಟದ, ಅಶೋಕಗೌಡ ಕೆ.ಪಾಟೀಲ, ವ್ಹಿ.ಎಸ್. ಮಾಟಲದಿನ್ನಿ, ಆನಂದ ಪೊತ್ನೀಸ, ಎಸ್.ಆರ್. ನಾಲತ್ವಾಡಮಠ, ಸೋಮನಾಥ ಕೆ. ಜಾಲಿ, ವಿರೇಶ ಕೂಗು, ಚಂದ್ರು ಬಾಳಿಹಳ್ಳಿಮಠ, ಈಶ್ವರಪ್ಪ ಮುನವಳ್ಳಿ ಪಾಲ್ಗೊಂಡಿದ್ದರೆಂದು ಮಹಿಳಾ ಘಟಕದ ಗೌರವ ಕಾರ್ಯದರ್ಶಿಗಳಾದ ಜ್ಯೋತಿ ದಾನಪ್ಪಗೌಡ್ರ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಸಾಧಕ ರೈತ ಮಹಿಳೆ ಮಂಗಳಾ ಕಿರಣ ನೀಲಗುಂದ, ಗದಗ ನಗರದ ಮುದ್ರಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಂದಿನಿ ಬಸವರಾಜ ಶಾಬಾದಿಮಠ, ಬೆಟಗೇರಿ ನಗರದ ಕೂಡಲ ಸಂಗಮೇಶ್ವರ ಪ್ಯಾಕಿಂಗ್ ಇಂಡಸ್ಟ್ರೀಸ್‌ನ ನಿರ್ಮಲಾ ದಶರಥರಾಜ ಕೊಳ್ಳಿ ಹಾಗೂ ಅಳವಂಡಿ ಎಚ್.ಪಿ. ಗ್ಯಾಸ್ ವಿತರಕರಾದ ರಶ್ಮಿ ಚನ್ನಬಸವರಾಜ ಕುರಗೊಡ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷರಾದ ಎಸ್.ಪಿ. ಸಂಶಿವ್ಮಠ, ಸಂಸ್ಥೆಯ ಮಹಿಳಾ ಘಟಕದದ ಮಾಜಿ ಅಧ್ಯಕ್ಷರಾದ ಜಯಶ್ರೀ ಉಮೇಶ ಹುಬ್ಬಳ್ಳಿ, ಜಯಶ್ರೀ ತಾತನಗೌಡ ಪಾಟೀಲ ಹಾಗೂ ನಿಕಟಪೂರ್ವ ಅಧ್ಯಕ್ಷರಾದ ಸುವರ್ಣಾ ಸದಾಶಿವಯ್ಯ ಮದರಿಮಠ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!