ವಿಜಯಸಾಕ್ಷಿ ಸುದ್ದಿ, ಡಂಬಳ: ಶಿಕ್ಷಣಕ್ಕೆ ಹೆಚ್ಚು ಮಹತ್ವವಿದ್ದು, ನಮ್ಮ ಕುಟುಂಬದ ಸ್ಥಿತಿಯನ್ನೂ ಬದಲಾವಣೆ ಮಾಡುವ ಶಕ್ತಿ ಶಿಕ್ಷಣಕ್ಕಿದೆ. ಸರ್ಕಾರಿ ಶಾಲೆಗಳಲ್ಲಿ ಉಚಿತ ಹಾಗೂ ಉತ್ತಮ ಶಿಕ್ಷಣ ನೀಡುತ್ತಿದ್ದು, ಇಲ್ಲಿನ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಬಿಓಐ ಬ್ಯಾಂಕಿನ ವ್ಯವಸ್ಥಾಪಕ ಜಗದೀಶ ಕನ್ಸೋಗಿ ಹೇಳಿದರು.
ಡಂಬಳ ಗ್ರಾಮದ ಸರಕಾರಿ ಡಿಪಿಇಪಿ ಶಾಲಾ ಮಕ್ಕಳಿಗೆ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ 300 ನೋಟ್‌ಬುಕಗಗಗಳನ್ನು ವಿತರಿಸಿ ಅವರು ಮಾತನಾಡಿದರು.
ಎಸ್‌ಡಿಎಮ್‌ಸಿ ಅಧ್ಯಕ್ಷ ಗವಿಸಿದ್ದಪ್ಪ ಹಾದಿಮನಿ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಕರಿದ್ದಾರೆ. ಬಡವರು, ಶೋಷಿತ ವರ್ಗದ ಸಮಗ್ರ ಅಭಿವೃದ್ಧಿಗೆ ಶಿಕ್ಷಕರ ಪಾತ್ರ ಅನನ್ಯವಾಗಿದೆ. ಮಕ್ಕಳ ಸಮಗ್ರ ಅಭಿವೃದ್ಧಿಯ ಮೂಲಕ ದೇಶದ ಆಸ್ತಿಯನ್ನಾಗಿ ಮಾಡಬೇಕೆಂದು ಹೇಳಿದರು.
ಮುಖ್ಯೋಪಾಧ್ಯಾಯ ಎಸ್.ಜಿ. ಪಾಟೀಲ್, ಬ್ಯಾಂಕ್ ಸಿಬ್ಬಂದಿ ಮಹೇಶ ಬಂಡಿ, ಶಿಕ್ಷಕಿಯರಾದ ಐ.ಬಿ. ಅಂಗಡಿ, ವಿ.ಆರ್. ಅಥಣಿ, ಆರ್.ಎ. ಅಕ್ಕಿ, ಪಿ.ಕೆ. ಲಮಾಣಿ, ಪಿ.ಎಂ. ಗುಡದೂರ, ಸಿ.ಜಿ. ವಾಲ್ಮೀಕಿ, ಗಂಗಮ್ಮ ಪೂಜಾರ, ಎಸ್.ಬಿ. ಸತ್ಯಣ್ಣವರ್ ಸೇರಿದಂತೆ ಎಸ್‌ಡಿಎಂಸಿ ಸದಸ್ಯರು, ವಿದ್ಯಾರ್ಥಿಗಳು ಇದ್ದರು.