HomeBengaluru News`ಈ ಪಾದ ಪುಣ್ಯ ಪಾದ' ಚಲನಚಿತ್ರದ ಟೈಟಲ್ ಬಿಡುಗಡೆ

`ಈ ಪಾದ ಪುಣ್ಯ ಪಾದ’ ಚಲನಚಿತ್ರದ ಟೈಟಲ್ ಬಿಡುಗಡೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಬೆಂಗಳೂರು : ಪೂರ್ಣಚಂದ್ರ ಫಿಲಂಸ್ ಲಾಂಛನದಲ್ಲಿ ಮೂಡಿಬರುತ್ತಿರುವ `ಈ ಪಾದ ಪುಣ್ಯ ಪಾದ’ ಎಂಬ ಚಲನಚಿತ್ರದ ಟೈಟಲನ್ನು ಖ್ಯಾತ ಚಲನಚಿತ್ರ ನಿರ್ದೇಶಕ ಶಶಾಂಕ್ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭ ಕೋರಿದರು.

ಸಿದ್ದು ಪೂರ್ಣಚಂದ್ರ ಈ ಚಿತ್ರಕ್ಕೆ ಕಥೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಮುಖ್ಯಪಾತ್ರದಲ್ಲಿ ಆಟೋ ನಾಗರಾಜ್, ಮಮತಾ ರಾಹುತ್, ಪ್ರಭಾಕರ್ ಬೋರೇಗೌಡ, ಪ್ರಮಿಳಾ ಸುಬ್ರಹ್ಮಣ್ಯಂ, ಹರೀಶ್ ಕುಂದೂರ್, ಸನ್ನಿ ಇನ್ನೂ ಮುಂತಾದವರ ತಾರಾಗಣವಿದೆ. ಛಾಯಾಗ್ರಹಣ ರಾಜು ಹೆಮ್ಮಿಗೆಪುರ, ಸಂಗೀತ ಅನಂತ್ ಆರ್ಯನ್, ಸಂಕಲನ ದೀಪಕ್, ವಸ್ತç ವಿನ್ಯಾಸ ನಾಗರತ್ನ ಕೆ.ಹೆಚ್, ಪ್ರೊಡಕ್ಷನ್ ಡಿಸೈನ್ ದಿಲೀಪ್ ಹೆಚ್.ಆರ್, ಕಾರ್ಯಕಾರಿ ನಿರ್ಮಾಪಕರು ಪುಟ್ಟರಾಜು ಎ.ಕೆ. ಆಲಗೌಡನ ಹಳ್ಳಿ, ಕಲಾ ನಿರ್ದೇಶನ ಬಸವರಾಜ್ ಆಚಾರ್, ಪಿಆರ್‌ಓ ಸುಧೀಂದ್ರ ವೆಂಕಟೇಶ, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಗಸ್ಟ್ ಮೊದಲ ವಾರದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಬೆಂಗಳೂರು, ರಾಮನಗರ, ಚನ್ನಪಟ್ಟಣ ಮತ್ತು ಸುತ್ತಮುತ್ತ ಹಳ್ಳಿಗಳಲ್ಲಿ ಚಿತ್ರೀಕರಣವಾಗುತ್ತದೆ ಎಂದು ನಿರ್ದೇಶಕ ಸಿದ್ದು ಪೂರ್ಣಚಂದ್ರ ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!