ಕೊಡಗಿನಲ್ಲಿ ವೈದ್ಯರ ಮುಷ್ಕರ ಎಫೆಕ್ಟ್: ಮಗನ ಚಿಕಿತ್ಸೆಗಾಗಿ ವೈದ್ಯರಿಗೆ ಮೊರೆ ಇಟ್ಟ ತಾಯಿ

0
Spread the love

ಕೊಡಗು: ಪಶ್ಚಿಮ ಬಂಗಾಳದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಕೊಲೆ ಖಂಡಿಸಿ ಒಪಿಡಿ ಸೇವೆ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತಿದೆ. ಬೆಳಗ್ಗೆ 6ರಿಂದ ಭಾನುವಾರ ಬೆಳಗ್ಗೆ 6ರವರೆಗೆ ಸೇವೆ ಸ್ಥಗಿತವಾಗಿರಲಿದೆ. ಇಂದು ಜಿಲ್ಲಾಸ್ಪತ್ರೆ ಮಕ್ಕಳ ವಿಭಾಗದಲ್ಲಿ ಡ್ಯೂಟಿ ಮಾಡಬೇಕಿದ್ದ ಡಾ. ಕುಶ್ವಂತ್  ವೈದ್ಯರ ಮುಷ್ಕರಕ್ಕೆ ತೆರಳಿರುವ ಕಾರಣ ಬದಲಿ ವೈದ್ಯರ ವ್ಯವಸ್ಥೆಯಿಲ್ಲದೆ ಮಕ್ಕಳನ್ನು ಚಿಕಿತ್ಸೆಗೆ ಕರೆತಂದಿದ್ದ ಪೋಷಕರು ಪರದಾಡುವಂತಾಯಿತು.

Advertisement

ನಿನ್ನೆ ರಾತ್ರಿಯಿಂದ ನಿರಂತರ ವಾಂತಿ ಮಾಡಿಕೊಳ್ಳುತ್ತಿರುವ ಭಾಗಮಂಡಲ ವಸತಿ ಶಾಲೆಯಲ್ಲಿ ಓದುತ್ತಿರುವ ರಿಜಿತ್ ಎಂಬ ವಿದ್ಯಾರ್ಥಿಗೆ ಇಂದು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಚಿಕಿತ್ಸೆ ಕೊಡಿಸಲು ಬಂದ ತಾಯಿಗೆ ಆಘಾತವಾಗಿದೆ. ಮಗನಿಗೆ ಚಿಕಿತ್ಸೆ ನೀಡಿ ಎಂದು ಎಲ್ಲಾ ವೈದ್ಯರ ಮೊರೆ ಹೋದರು ಪ್ರಯೋಜನವಾಗದೇ ನಿನ್ನೆ ರಾತ್ರಿ ಪಾಳಯದಲ್ಲಿ ಡ್ಯೂಟಿ ಮಾಡಿದ್ದ ಮಹಿಳಾ ವೈಧ್ಯೇ ಸಲ್ಮಾ  ನಂತರ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.  ಇಂದು ವೈದ್ಯರ ಮುಷ್ಕರದಿಂದ ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳು ಪರದಾಡುವಂತಾಗಿದೆ.


Spread the love

LEAVE A REPLY

Please enter your comment!
Please enter your name here