ಬೆಂಗಳೂರು:- ಗೌರಿ-ಗಣೇಶ ಹಬ್ಬಕ್ಕೆಂದು ಊರಿಗೆ ಹೋಗುವವರಿಗೆ ಬಿಗ್ ಶಾಕ್ ಎದುರಾಗಿದ್ದು, ಖಾಸಗಿ ಬಸ್ ಗಳ ದರ ದುಬಾರಿಯಾಗಿದೆ.
Advertisement
ಎಸ್, ವಿನಾಯಕ ಚೌತಿ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇರುವ ಸಾಕಷ್ಟು ಜನರು ತಮ್ಮ ಹಳ್ಳಿಗಳಿಗೆ ಹೋಗಿ ಆಚರಣೆ ಮಾಡುತ್ತಾರೆ. ಆದರೆ ಊರಿಗೆ ಹೊರಟವರ ಜೇಬಿನಿಂದ ದೊಡ್ಡ ಮೊತ್ತದಲ್ಲಿ ಹಣ ಪಡೆಯಲು ಖಾಸಗಿ ಬಸ್ಗಳು ಶುರು ಮಾಡಿವೆ.
ಗಣೇಶನ ಹಬ್ಬಕ್ಕೆ ಜನ ಸಾಮಾನ್ಯರಿಗೆ ದರ ಏರಿಕೆಯ ಬರೆ ಎಳೆಯಲಾಗುತ್ತಿದೆ. ಕೆಲ ಖಾಸಗಿ ಬಸ್ ಮಾಲೀಕರಿಂದ ಜನ ಸಾಮಾನ್ಯರ ಸುಲಿಗೆ ನಡೆಯುತ್ತಿದೆ ಎನ್ನಬಹುದು. ಬಸ್ ಪ್ರಯಾಣ ದರ, ಒನ್ ಟು ತ್ರಿಬಲ್ಗೆ ಹೆಚ್ಚಳ ಮಾಡಲಾಗಿದೆ. ಇದರಿಂದ ಪ್ರಯಾಣಿಕರು ದುಬಾರಿ ಹಣ ಕೊಟ್ಟು ತಮ್ಮ ಊರಿಗೆ ಹೋಗಬೇಕಿದೆ. ಈ ಮೂಲಕ ಗೌರಿ, ಗಣೇಶ ಹಬ್ಬವೆಂದು ಊರಿಗೆ ಹೋಗುತ್ತಿದ್ದವರಿಂದ ದರೋಡೆ ಮಾಡಲಾಗುತ್ತಿದೆ.