ಬೀದರ್: ಮಧ್ಯಪ್ರಾಚ್ಯ ಯುದ್ಧದ ಸಂಘರ್ಷದಿಂದ ಬೀದರ್ ಜಿಲ್ಲೆಯ ಕಲ್ಲಂಗಡಿ ಬೆಳೆಗಾರರ ಸ್ಥಿತಿ ಹೇಳತ್ತೀರದ್ದಾಗಿದೆ.
ರಫ್ತು ಸಾಧ್ಯವಾಗದ ಕಾರಣ, ಈ ಬಾರಿ 1 ಕೆಜಿ ಕಲ್ಲಂಗಡಿಯ ಬೆಲೆ ಕೇವಲ ರೂ. 2ಕ್ಕೆ ಕುಸಿತವಾಗಿದೆ. ಹಿಂದಿನ ವರ್ಷ ಈ ಸಮಯದಲ್ಲಿ ಕಲ್ಲಂಗಡಿ 12–15 ರೂ.ಗೆ ಮಾರಾಟವಾಗುತ್ತಿತ್ತು. ಆದ್ರೆ ಈಗ ಕೆವಲ 2 ರೂ. ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಕಡಿಮೆಗೆ ಕೊಟ್ರು ಖರೀದಿಗೆ ವರ್ತಕರು ಬರುತ್ತಿಲ್ಲ ಎಂದು ರೈತರು ವಿಷಾದ ವ್ಯಕ್ತಪಡಿಸಿದ್ದಾರೆ.
ಬೀದರ್ ತಾಲ್ಲೂಕಿನ ರೈತ ವೈಜನಾಥ್ ಸಿದ್ದಾ 1 ಲಕ್ಷ ರೂ. ಖರ್ಚು ಮಾಡಿ ಕಲ್ಲಂಗಡಿ ಬೆಳೆದಿದ್ದರು. ಆದರೆ ರಫ್ತು ಇಲ್ಲದ ಕಾರಣ, ಬೆಳೆ ಜಮೀನಿನಲ್ಲಿ ಕೊಳೆತು ಹೋಗುತ್ತಿದೆ. “ಸಾಕಷ್ಟು ಹಣ ಖರ್ಚು ಮಾಡಿದ್ದು, ಕಟಾವು ಮಾಡಿ ಮಾರಾಟ ಮಾಡಲು ಸಿದ್ಧವಾಗಿದ್ದಾಗ ಯುದ್ಧ ಆರಂಭಗೊಂಡು ಮುಂದುವರಿಯುತ್ತಿದೆ. ಈ ನಷ್ಟಕ್ಕೆ ಸರ್ಕಾರ ಪರಿಹಾರ ನೀಡಬೇಕು, ಎಂದು ರೈತರು ಮನವಿ ಮಾಡಿದ್ದಾರೆ.



