ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಸರಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ನಿಮ್ಮನ್ನು ಅಪೌಷ್ಟಿಕತೆಯಿಂದ ಹೊರತಂದು ನಿಮ್ಮಲ್ಲಿ ಪೌಷ್ಟಿಕತೆಯನ್ನು ಹೆಚ್ಚಿಸುವ ಸಲುವಾಗಿ ಸರಕಾರ ಬಿಸಿಯೂಟದೊಂದಿಗೆ ಮೊಟ್ಟೆ ನೀಡುವ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ನೀವುಗಳು ಜಾಣರಾಗಿ ಜೀವನದಲ್ಲಿ ಉನ್ನತಿ ಸಾಧಿಸಬೇಕೆಂದು ಜಕ್ಕಲಿ ಜಿಎಂಪಿಎಸ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸಂಗಯ್ಯ ಪ್ರಭುಸ್ವಾಮಿಮಠ ಹೇಳಿದರು.
ಶಾಲೆಯಲ್ಲಿ ಬುಧವಾರದಿಂದ ಜಾರಿಗೊಳಿಸಲಾದ ವಾರದ ಎಲ್ಲಾ ದಿನ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈವರೆಗೆ ಸರಕಾರ ವಾರದ ಎರಡು ದಿನಗಳು ಮಾತ್ರ ಮೊಟ್ಟೆಯನ್ನು ನೀಡುತ್ತಿತ್ತು. ಆದರೆ ಸರಕಾರದೊಂದಿಗೆ ಅಜೀಂ ಪ್ರೇಮ್‌ಜಿ ಫೌಂಡೇಷನ್ ಕೈಗೂಡಿಸಿರುವುದರಿಂದ ವಾರದ ಎಲ್ಲಾ ದಿನ ಮೊಟ್ಟೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಎಸ್‌ಡಿಎಂಸಿ ಅಧ್ಯಕ್ಷೆ ಲಲಿತಾ ಪಾಟೀಲ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ ಅಧ್ಯಕ್ಷೆ ಗಂಗಮ್ಮ ಜಂಗಣ್ಣವರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರು, ಎಸ್‌ಡಿಎಂಸಿ ಸದಸ್ಯರು, ಗಣ್ಯರಾದ ದ್ಯಾಮಣ್ಣ ಜಂಗಣ್ಣವರ, ಎಚ್‌ಪಿಕೆಜಿಎಸ್ ಶಾಲೆಯ ಮುಖ್ಯ ಶಿಕ್ಷಕ ಶ್ರೀಕಾಂತ ಗವಿ, ಶಿಕ್ಷಕರಾದ ವಿ.ಎ. ಕುಂಬಾರ, ಎಂ.ವಿ. ತಾಳಿಕೋಟಿ, ಎಸ್.ಎ. ಪಲ್ಲೇದ, ಎ.ಎಂ. ಸೂರಭಟ್ಟನವರ, ಶಿಕ್ಷಕಿಯರಾದ ಎ.ಬಿ. ಜಕ್ಕಲಿ, ವಿ.ಎ. ದಿಂಡೂರ, ಎ.ಪಿ. ಶೆಟ್ಟರ, ಸಿ.ಎಸ್. ಬೆಳ್ಳಟ್ಟಿ, ಪಿ.ಜಿ. ಹುಯಿಲಗೋಳ, ಎಸ್.ಎಸ್. ಯಲ್ಲರೆಡ್ಡಿ ಮುಂತಾದವರಿದ್ದರು.