ಗದಗ: ಗದಗ ಈದ್ ಮಿಲಾದ್ ಸಮಿತಿ ಸದಸ್ಯರು ಗದುಗಿನ ಆಯ್‌ಎಮ್‌ಎ ಸಹಯೋಗದೊಂದಿಗೆ ರಕ್ತದಾನ ಶಿಬಿರ ಆಯೋಜಿಸಿದ್ದರು. ಹಬ್ಬದ ದಿನದಂದು ಸಮಿತಿ ಸದಸ್ಯರು ಇತರರಿರೂ ರಕ್ತದಾನ ಮಾಡಲು ಪ್ರೇರೇಪಿಸಿದರು. ಶುಕ್ರವಾರ ಒಟ್ಟು 23 ಯೂನಿಟ್ ರಕ್ತ ಸಂಗ್ರಹವಾಗಿದೆ ಎಂದು ವೈದ್ಯ ಪ್ಯಾರಾಲಿ ನೂರಾಲಿ ತಿಳಿಸಿದರು. ಬರುವ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಶಿಬಿರಗಳನ್ನು ಮತ್ತು ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸುವ ಉದ್ದೇಶವಿದೆ ಎಂದು ಈದ್ ಮಿಲಾದ್ ಸಮಿತಿ ಸದಸ್ಯರು ತಿಳಿಸಿದರು.
Advertisement