ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವೃದ್ದೆ ಕೊಲೆ ಮಾಡಿ ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದ ಆರೋಪಿಗಳನ್ನು ಸುಬ್ರಮಣ್ಯಪುರ ಪೋಲೀಸರು ಅರೆಸ್ಟ್ ಮಾಡಿದ್ದಾರೆ.
ಮಹಾರಾಷ್ಟ್ರ ಮೂಲದವರಾದ ಪ್ರಸಾದ್ ಶ್ರೀಶೈಲ(26), ಸಾಕ್ಷಿ (23) ಹಣಮಂತ್ ಹೊದ್ಲೂರು ಬಂಧಿತರು. ಮಂಗಳವಾರ ಉತ್ತರಹಳ್ಳಿ ಮನೆಯಲ್ಲಿ ಕೊಲೆ ನಡೆದಿತ್ತು. ಆರೋಪಿ ಪ್ರಸಾದ್ ಸೆಂಟ್ರಿಂಗ್ ಕೆಲಸ ಮಾಡ್ತಿದ್ದ. ಆರೋಪಿತೆ ಸಾಕ್ಷಿ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಆರೋಪಿಗಳು ಕೊಲೆ ಮಾಡಿ ತಮಗೆ ಏನು ಗೊತ್ತಿಲ್ಲದಂತೆ ನಾಟಕ ಆಡಿದ್ದರು.
ಸದ್ಯ ಇದೀಗ ಇಬ್ಬರನ್ನು ಬಂಧಿಸಿರುವ ಪೋಲೀಸರು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.



