ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ಯುವ ಕಾಂಗ್ರೆಸ್‌ಗೆ ಜರುಗಿದ ಚುನಾವಣೆಯಲ್ಲಿ ವಾಣಿ ಹಿರೇಮಠ ಗದಗ ಜಿಲ್ಲಾ ಯುವ ಕಾಂಗ್ರೆಸ್‌ನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ವಾಣಿ ಹಿರೇಮಠರವರಿಗೆ ಕಾನೂನು, ಸಂಸದೀಯ ವ್ಯವಹಾರ ಪ್ರವಾಸೋದ್ಯಮ ಸಚಿವರಾದ ಡಾ. ಎಚ್.ಕೆ. ಪಾಟೀಲ, ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ರೋಣ ಮತಕ್ಷೇತ್ರದ ಶಾಸಕರು, ಖನಿಜ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರಾದ ಜಿ.ಎಸ್. ಪಾಟೀಲ, ಗದಗ ಜಿಲ್ಲಾ ಯುವ ಕಾಂಗ್ರೆಸ್‌ನ ಅಧ್ಯಕ್ಷರಾದ ಕೃಷ್ಣಗೌಡ ಎಚ್.ಪಾಟೀಲ, ಬಿ.ಬಿ. ಅಸೂಟಿ, ಅಶೋಕ ಮಂದಾಲಿ, ಸುಜಾತಾ ದೊಡ್ಡಮನಿ, ನೀಲಮ್ಮಾ ಬೋಳನವರ, ಬಸವರಾಜ ಕಡೇಮನಿ, ದೇವರಾಜ ಬಾರಕೇರ, ಶಕುಂತಲಾ ಅಕ್ಕಿ, ಮೀನಾಕ್ಷಿ ಬೆನಕಣ್ಣನವರ, ಜಾನಕಿ ಮಲ್ಲಾಪೂರ, ರುದ್ರಮ್ಮಾ ಕೆರಕಲಮಟ್ಟಿ, ವೀಣಾ ಕಟ್ನಳ್ಳಿ, ಕುಸುಮಾ ಬೆಳಗಟ್ಟಿ, ಲೀಲಾ ಸಂಕಣ್ಣವರ ಮುಂತಾದವರು ಅಭಿನಂದನೆ ಸಲ್ಲಿಸಿ, ಇವರ ಅಧಿಕಾರಾವಧಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಇನ್ನೂ ಅತ್ಯುತ್ತಮವಾಗಿ ಸಂಘಟಿಸುವಂತಾಗಲಿ ಎಂದು ಶುಭ ಹಾರೈಸಿದ್ದಾರೆ.