ವಿಜಯಸಾಕ್ಷಿ ಸುದ್ದಿ, ಗದಗ : ಜೆಡಿಎಸ್ ಗದಗ ಜಿಲ್ಲಾಧ್ಯಕ್ಷ ಎಂ.ವೈ. ಮುಧೋಳ, ಜಿಲ್ಲಾ ಹಾಗೂ ತಾಲೂಕಾ ಪದಾಧಿಕಾರಿಗಳು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ತೆರಳಿ ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಚನ್ನಪಟ್ಟಣ ಹಾಗೂ ಗ್ರಾಮಾಂತರ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಕೈಗೊಂಡರು.
Advertisement
ಗದಗ, ಶಿರಹಟ್ಟಿ, ಮುಂಡರಗಿ ಮತ್ತು ಗಜೇಂದ್ರಗಡ ನಗರಗಳಿಂದ ಪಕ್ಷದ ಪದಾಧಿಕಾರಿಗಳಾದ ಹಾಜಿಅಲಿ ಎಚ್.ಕೊಪ್ಪಳ, ಮಂಜುನಾಥ ದೊಡ್ಮನಿ, ಸಂಗಪ್ಪ ಯಲಬುಣಚಿ, ಬಾದಶಾಸಾಬ ಬಾಗವಾನ, ಲಲಿತಾ ಕಲ್ಲಪ್ಪನವರ, ಜಯರಾಜ ವಾಲಿ, ವಿನಾಯಕ ಪರ್ವತ, ಶಿಲ್ಪಾ ಪ್ಯಾಟಿ, ನೇತ್ರಾ ಬೆಳವಣಿಕಿ ಸೇರಿದಂತೆ ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿದ್ದರು.