ಚುನಾವಣಾ ಡ್ಯೂಟಿ ಅಂದ್ರ ತಮಾಷಿ ಅಲ್ರೀ!

0
article
Spread the love

ಮೇ 7ರ ಲೋಕಸಭಾ ಚುನಾವಣೆಯ ಮತದಾನದ ದಿನ, ಈ ದಿನ ನನ್ನ ಜೀವನದಾಗ ಮರಿಯೋದಕ್ಕೆ ಆಗೋದಿಲ್ಲ. ಯಾಕಂದ್ರ ನಾವು ಪ್ರತಿ ಚುನಾವಣೆ ಒಳಗೂ ಮತಾ ಹಾಕಿ ಅಷ್ಟ ಗೊತ್ತಿತ್ತು. ಯಾವ ರೀತಿ ಚುನಾವಣೆ ನಡೆಯುತ್ತೆ ಅಂತಾ ನಾವು ನೋಡಿರಲಿಲ್ಲ. ಅದಕ್ಕ ಈ ಅವಕಾಶ ತಪೋಸ್ಕೋಬಾರ್ದು ಅಂತ ನನಗ ಮತ್ತ ನನ್ನ ಗೆಳತಿಗೆ ಇಬ್ರಿಗೂ ಇತ್ತು. ಒಂದ ಸರಿನು ಚುನಾವಣೆ ಡ್ಯೂಟಿ ಮಾಡಿರಲಿಲ್ಲ! ಖರೆ ಹೇಳ್ಬೇಕು ಅಂದ್ರೆ ನಮಗ್ ಚುನಾವಣೆ ಡ್ಯೂಟಿ ಹಾಕಿರಲಿಲ್ಲ. ಆದ್ರೂ ಸಹ ನಾವು ನಮ್ಮ ಪ್ರಯತ್ನ ಮಾತ್ರ ಬಿಡಲಿಲ್ಲ ನಾವು ಚುನಾವಣೆ ಡ್ಯೂಟಿಗೆ ಬರ್ತೀವಿ ಅಂತ ನಮ್ಮ ಕಚೇರಿಯ ಮೇಡಂ ಅವರಿಗೆ ಕೇಳಿದೆವು. ಅವರು ನಗುಮೊಗದಿಂದ ನೀವು ಸಹ ನಮ್ಮ ಜೊತೆಗೆ ಬರಬಹುದು ಅಂದ್ರು. ಅವರ ಆ ಮಾತನ್ನು ಕೇಳಿ ಖುಷಿ ತಡೆಯದಾಯಿತು.

Advertisement

ನಾವು ಬೆಳಿಗ್ಗೆ 9 ಗಂಟೆಗೆ ನಮ್ಮ ಕಚೇರಿ ವಾಹನ ಹತ್ತಿದ್ವಿ. ನಮ್ಮ ಕಚೇರಿ ಸಿಬ್ಬಂದಿ ಅವರು ಅಷ್ಟೇ ಅಲ್ಲಾ ನಮ್ಮ ಎಲ್ಲಾ ಪತ್ರಿಕೆ, ಮಾಧ್ಯಮ ಮಿತ್ರರು ಇದ್ರು. ಎಲ್ಲರೂ ಬಾಳ ಚಲೋ ಜನಾ! ನಾವು ಫಸ್ಟ್ ಟೈಮ್ ಹೋಗಿರೋದ್ರಿಂದ ಭಯಾ ಇತ್ತು. ಆದ್ರ ಅವರು ನಮ್ಮ ಜೊತೆ ನಡ್ಕೊಂಡ ರೀತಿ ನನಗ ಭಾಳ ಖುಷಿ ಕೊಟ್ಟಿತ್ತು. ಕುಂದಗೋಳ ತಾಲೂಕಿನ ಕೆಲವು ಹಳ್ಳಿಗೆ ಹೋಗಿ ಚುನಾವಣೆ ಹೆಂಗ ನಡಿಯಾತೆತಿ ನೋಡಿ ತಿಳ್ಕೊಂಡು ಲಾಸ್ಟಿಗೆ ಚಿಕ್ಕನೇರ್ತಿ ಬಂದು ರೊಟ್ಟಿಗವಾಡ ಗ್ರಾಮದ ಮೂಲಕ ಹುಬ್ಳಿಗೆ ಗಾಡಿ ಬಿಟ್ವಿ. ಹುಬ್ಳಿಗೆ ಬಂದಾಗ ಸಮಯ 2.30 ಆಗಿತ್ತು. ಊಟ ಮಾಡಿ ಕಚೇರಿಗೆ ಹೋದಾಗ 3.30 ಗಂಟೆ ಆಗಿತ್ತು.

ನಾವು ಹೋಗಿ ಬಂದಿರೋ ಸುದ್ದಿ ಮಾಡಿ ಕಳ್ಸಿ 5 ಗಂಟೆಗೆ ಮನಿಗೆ ಹೋದ್ರಾಯ್ತು ಅಂತೇಳಿ ಹೊರಗ ಬಂದ್ವಿ. ನಾನು ನನ್ನ ಗೆಳತಿ ಬಸ್‌ಗೆ ಹೋಗಾಕ ಬಸ್ ಸ್ಟಾಪ್‌ಗೆ ಹೋದ್ವಿ. ಅಲ್ಲಿ ಬಸ್ ಬಂದಾಗ 6 ಗಂಟೆ ಆಗಿತ್ತು. ಅಂತೂ ಇಂತೂ ಹುಬ್ಳಿ-ಧಾರವಾಡ ಬಸ್ ಬಂತು. ನಾವು ಹತ್ತಿದಾಗ ಬಸ್ ಖಾಲಿನ ಇತ್ತು! ಬಸ್ ಹತ್ತಿದ್ವೀ ಹೆಣ್ಮಕ್ಕಳಿಗೆ ಫ್ರೀ ಟಿಕೆಟ್ ಇದ್ದಿದ್ದರಿಂದ ಟಿಕೇಟ್ ತಗೊಂಡ್ವಿ. ಬಸ್ ಹುಬ್ಳಿ ಬಸ್ ಸ್ಟ್ಯಾಂಡ್ ಬರುತ್ತಿದ್ದ ಹಾಗೇ ಬಸ್ ಫುಲ್ ಆಯ್ತು. ಸಮಯ 6 ಗಂಟೆಗೆ ಆದ್ರೂ ಸಹ ಸೂರ್ಯನ ಉರಿ ಬಿಸಿಲು ಕಡ್ಮಿ ಅಂತೂ ಆಗಿರಲಿಲಾ! ಚುನಾವಣೆ ಇರೋದಕ್ಕೊ ಏನೋ ನನಗ ಗೊತ್ತಿಲ್ಲಾ ಬಸ್ ಕಮ್ಮಿ ಇದ್ವು. ಒಂದೇ ಬಸ್ ಅಲ್ಲಿ ಜನ ತುಂಬಿದ್ರು. ನಾವು ಪೂರ್ತಿ ಲಾಸ್ಟಿಗೆ ಕೂತಿದ್ವಿ. ಸಣ್ಣ ಹುಡುಗಾ ಜಳ ಬಾಳ ಇರೋದಕ್ಕ ಅದು ಅಳ್ತಾಯಿತು.

article

ಅದಕ್ಕ ನನ್ನ ಗೆಳತಿ ದೊಡ್ಡ ಮನಸ ಮಾಡಿ ಆ ಹುಡ್ಗನ್ನ ತನ್ನ ಕಡೆ ತಗೊಂಡ ಕುರಸಕೊಂಡ್ಲು. ಅವಾಗ ಅದು ಸುಮ್ಮ್ ಏನೋ ಆಯ್ತು, ಅದ್ರ ಇರ್ಲಾರದ ಇರವಿ ಬಿಟಗೊಂಡಂಗ್ ಆಗಿತ್ತು. ಹುಡುಗ ಬಾಳ ಉಡಾಳ ಇತ್ತು. ನನ್ನ ಗೆಳತಿಗೆ ಹುಡುಗನನ್ನ ಸುಮ್ಮ ಕುರ್ಸುದ್ರಾಗ ಸಾಕಾಗಿ ಹೋಗಿತ್ತು!

ಅಷ್ಟರಾಗ ಅಲ್ಲಿಂದ ಒಂದು ಧ್ವನಿ ಕೇಳ್ತು. ನಮಗೂ ಹೆಂಡ್ರು ಮಕ್ಳು ಅದಾರ…. ನಿಮಗಷ್ಟ ಅಲ್ಲಾ….ಅಂತೇಳಿ ಆ ಮಾತು ಕೇಳಿದ ಕೂಡಲೇ ನನ್ನ ಗಮನ ಆ ಕಡೆನ ಹೋಯ್ತು. ನಾನು ಏನ್ ಅಂದ್ರು ಅವರು ಅಂದೆ. ಆಕಿ ಹೇಳಿದ್ಲು ಹಿಂಗ್ ಅಂದ್ರು ಅಂತೇಳಿ ಅಂದು ಸುಮ್ಮ ಇರ್ಲಿಲ್ಲ. ಮತ್ತ ಏನ ಅಂದ್ಲು ಕೇಳಿದೆ. ಲೇಖನ ಬರೀಲಿಕ್ಕೆ ಒಳ್ಳೆ ಹೆಡ್ಲೈನ್ ನೋಡ ಅಂದು.್ಲ ಅಕಿ ಅಷ್ಟ ಅಂದಿದ್ದ ತಡಾ ನಾನ ಮೊಬೈಲ್ ತಗೊಂಡು ಆ ಹೆಡ್ಲೈನ್ ಕೊಟ್ಟೆ ಮತ್ತ ಮರಿಬಾರ್ದು ಅಂತೇಳಿ. ಈಗ ವಿಷಯಕ್ಕೆ ಬರ್ತೀನಿ ಆ ಮಾತು ಅಂದಿದ್ದ ಬೇರೆ ಯಾರು ಅಲ್ಲಾ ನಾವು ಕುಂತಿದ್ದ ಬಸ್ ಕಂಡಕ್ಟರ್! ಈಗ ಬಸ್ ಫ್ರೀ ಮಾಡಿದಕ್ಕ ಬಸ್ ರಷ್ ಆಗ್ಲೀಕತ್ತಾವೋ ಅಥವಾ ಬಸ್ ಕಮ್ಮಿ ಅಗ್ಯಾವೋ ಗೊತ್ತ ಅಗವಲ್ದು. ಮೊದ್ಲು ಗಂಡಮಕ್ಳು ಮೆಟ್ಟಲ ಕಡೆ ನಿಲ್ಲೋ ಕಾಲ ಒಂದಿತ್ತು. ಈಗ ಅದು ಹೊಗೆದ. ಹೆಣ್ಮಕ್ಕಳು ಅಲ್ಲೇ ನಿಲ್ಲೋ ಪರಿಸ್ಥಿತಿ ಬಂದೇತಿ. ಹಿಂಗಾಗಿ ಕಂಡಕ್ಟರ್ ಟಿಕೆಟ್ ಕೊಡಾಕ ಹತ್ತಾಗ ಒಬ್ಬಕಿ ಹೆಣ್ಮಗಳು ಅಲ್ಲೇ ನಿಂತಿದ್ಲು. ಒಳಗ ಬರಾಕ ಜಗಾ ಇಲ್ಲಾ ಕಂಡಕ್ಟರ ಒಳಗ ಬಾ ಅನ್ನಾಕತ್ತನಾ.. ಬಸ್ ನೋಡಿದ್ರೆ ಎತ್ತಿನ ಗಾಡಿಕ್ಕಿಂತ ಸ್ಲೋ ಇತ್ತು. ಕಂಡೆಕ್ಟರ್‌ಗೂ ಸಾಕಾಗಿತ್ತು. ಕಂಡಕ್ಟರ್‌ಗ ಎನ್ ಚಿಂತಿ ಆಂದ್ರ ಆಕಿ ಬೀಳ್ತಾಳ ಅನ್ನೋದಕ್ಕಿಂತ ಆಕಿ ಬಿದ್ರ ನನ್ನ ಮೇಲೆ ಕೇಸ್ ಅಕ್ಕೇತಿ ಅನ್ನೋದ ತಲಿ ಒಳಗ ಇತ್ತು ಕಾಣುತ್ತಾ! ಅದಕ್ಕ ಆ ಕಂಡಕ್ಟರ್‌ನ ಬಾಯಿ ಒಳಗ ನಮಗೂ ಹೆಂಡ್ರು ಮಕ್ಳು ಅದಾರ…. ನಿಮಗಷ್ಟ ಅಲ್ಲಾ ಅಂತೇಳಿ ಬಂತು ನೋಡ್ರಿ…..!
– ಶಿಲ್ಪಾ ವಾಲಿಕಾರ.
ಪ್ರಶಿಕ್ಷಣಾರ್ಥಿ, ರಾಜ್ಯ ಸಮಾಚಾರ ಕೇಂದ್ರ.
ಹುಬ್ಬಳ್ಳಿ.


Spread the love

LEAVE A REPLY

Please enter your comment!
Please enter your name here