ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಾ ವಕೀಲರ ಸಂಘದ ಸದಸ್ಯರು ಸಭೆ ಸೇರಿ 2025-26, 2026-27ನೇ ಸಾಲಿನ ಅವಧಿಗೆ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
Advertisement
ನೂತನ ಅಧ್ಯಕ್ಷರಾಗಿ ಹಿರಿಯ ವಕೀಲ ಬಿ.ವಿ. ನೇಕಾರ ಅವರು ಆಯ್ಕೆಯಾಗಿದ್ದು, ಎಸ್.ಎಂ. ನಾವ್ಹಿ (ಉಪಾಧ್ಯಕ್ಷರು), ವಿ.ಎಸ್. ಪಶುಪತಿಹಾಳ (ಪ್ರಧಾನ ಕಾರ್ಯದರ್ಶಿ), ಆರ್.ಎಂ. ಕುರಿ (ಸಹಕಾರ್ಯದರ್ಶಿ), ಉಮಾ ಬಳ್ಳಾರಿ (ಖಜಾಂಚಿ), ಬಿ.ಎಸ್. ಬಾಳೇಶ್ವರಮಠ (ಗ್ರಂಥ ಪಾಲಕರು), ಎಸ್.ಸಿ. ನರಸಮ್ಮನವರ (ಸಹಗ್ರಂಥಪಾಲಕರು) ಅವರನ್ನು ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ನಿಕಟಪೂರ್ವ ಅಧ್ಯಕ್ಷ ಬಿ.ಎಸ್. ಬಾಳೇಶ್ವರಮಠ ಹಾಗೂ ಹಿರಿಯ ವಕೀಲರು ಅಭಿನಂದಿಸಿದ್ದಾರೆ.