ವಿಜಯಸಾಕ್ಷಿ ಸುದ್ದಿ, ಗದಗ: ಸಮೀಪದ ಬಿಂಕದಕಟ್ಟಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ನಿಂಗಪ್ಪ ಈರಪ್ಪ ಪರಪ್ಪನವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಅಭ್ಯರ್ಥಿಯಾಗಿ ಅವರೊಬ್ಬರೇ ನಾಮಪತ್ರ ಸಲ್ಲಿಸಿದ ಕಾರಣ ಸೂಚಕರಾದ ವರದಾರೆಡ್ಡಿ ದೇವರಡ್ಡಿ ರಂಗಪ್ಪನವರ ಸೂಚನೆಯಂತೆ ಚುನಾವಣಾ ಅಧಿಕಾರಿಗಳು ನಿಂಗಪ್ಪ ಈರಪ್ಪ ಪರಪ್ಪನವರ ಇವರ ಆಯ್ಕೆಯನ್ನು ಘೋಷಿಸಿ ಪ್ರಮಾಣಪತ್ರವನ್ನು ನೀಡಿದರು.
ಈ ಸಂದರ್ಭದಲ್ಲಿ ಬಿಂಕದಕಟ್ಟಿ ಗ್ರಾಮದ ಹಿರಿಯರಾದ ರವೀಂದ್ರ ಎಂ.ಮೂಲಿಮನಿ, ಗದಗ ತಾ.ಪಂ ಮಾಜಿ ಸದಸ್ಯ ಎಂ.ಐ. ಪಾಟೀಲ, ಬಿಂಕದಕಟ್ಟಿ ಗ್ರಾ.ಪಂ ಸರ್ವ ಸದಸ್ಯರು, ಹಿರೇಹಂದಿಗೋಳ ಮತ್ತು ಬಿಂಕದಕಟ್ಟಿ ಗ್ರಾಮಸ್ಥರು ನೂತನ ಅಧ್ಯಕ್ಷರಿಗೆ ಅಭಿನಂದನೆಗಳನ್ನು ತಿಳಿಸಿದರು.



