ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಜನತಾ ಪಾರ್ಟಿ ಗದಗ ವಿಧಾನಸಭಾ ಕ್ಷೇತ್ರದ ಗದಗ ನಗರ ಮಂಡಲದ ನೂತನ ಅಧ್ಯಕ್ಷರಾಗಿ ಗದಗ ನಗರದ ಪಕ್ಷದ ಸಾಮಾನ್ಯ ಕಾರ್ಯಕರ್ತ ಸುರೇಶ ಯಲ್ಲಪ್ಪ ಮರಳಪ್ಪನವರ ಅವರನ್ನು ಪಕ್ಷದ ಹಿರಿಯರು ಮತ್ತು ಗದಗ ನಗರ ಮಂಡಲ ಕೋರ್ ಕಮಿಟಿ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ, ವಿಧಾನ ಪರಿಷತ್ ಸದಸ್ಯರಾದ ಎಸ್.ವ್ಹಿ. ಸಂಕನೂರ, ಚುನಾವಣಾಧಿಕಾರಿ ಶಶಿಮೌಳಿ ಕುಲಕರ್ಣಿ, ಸಹ ಚುನಾವಣಾಧಿಕಾರಿ ಎಂ.ಎಸ್. ಕರೀಗೌಡ್ರ, ಮಾಜಿ ಜಿಲ್ಲಾಧ್ಯಕ್ಷ ಮೋಹನ ಮಾಳಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಪ್ರಮುಖರಾದ ಶ್ರೀಕಾಂತ ಖಟವಟೆ, ಜಗನ್ನಾಥಸಾ ಭಾಂಡಗೆ, ಬಿ.ಎಚ್. ಲದ್ವಾ, ಈಶಣ್ಣ ಮುನವಳ್ಳಿ, ಲೂಕ್ಕಣಸಾ ರಾಜೊಳ್ಳಿ, ಸಿದ್ದು ಪಲ್ಲೇದ, ಗ್ರಾಮೀಣ ಮಂಡಲ ಅಧ್ಯಕ್ಷ ಬೂದಪ್ಪ ಹಳ್ಳಿ, ಅನಿಲ ಅಬ್ಬಿಗೇರಿ, ಅಶೋಕ ಸಂಕಣ್ಣವರ, ಶಶಿಧರ ದಿಂಡೂರ, ಶಂಕರ ಕಾಕಿ, ಸುಧೀರ ಕಾಟಿಗರ, ದೇವಪ್ಪ ಗೊಟೂರ, ಛಗನ ರಾಜಪುರೋಹಿತ, ರಾಘವೇಂದ್ರ ಭಾಂಡಗೆ, ವಿಜಯ ಹಿರೇಮಠ, ಗೈಬುಸಾಬ ಕಲೇಬಾಯಿ, ಮುತ್ತಣ್ಣ ಮೂಲಿಮನಿ, ಡಿ.ಬಿ. ಕರೀಗೌಡ್ರ, ಸುಭಾಸ ಸುಂಕದ, ಸುರೇಶ ಹೆಬಸೂರ, ವಿನೋದ ಹಂಸನೂರ ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಗದಗ ನಗರ ಮಂಡಲ ಹಿಂದಿನ ಅಧ್ಯಕ್ಷ ಅನಿಲ ಅಬ್ಬಿಗೇರಿ ಇವರಿಂದ ನೂತನ ಅಧ್ಯಕ್ಷ ಸುರೇಶ ಮರಳಪ್ಪನವರರಿಗೆ ಪಕ್ಷದ ಶಾಲು ಹೊದೆಸಿ ಪಕ್ಷದ ಧ್ವಜ ಹಸ್ತಾಂತರಿಸಲಾಯಿತು.