ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಶ್ರೀ ಡಾ. ಪಂಡಿತ ಪುಟ್ಟರಾಜ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಎಂ.ಪಿ. ಮುಳಗುಂದ ಅವರ ಆದೇಶದ ಮೇರೆಗೆ ನಗರದ ಗುಜ್ಜರ ಬಸದಿ ರಸ್ತೆಯಲ್ಲಿರುವ ಸಂಘದ ಕಾರ್ಯಾಲಯದಲ್ಲಿ ಗದಗ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾ ಘಟಕದ ಕಾರ್ಯದರ್ಶಿಯಾಗಿ ಮುದುಕಪ್ಪ ನಾ.ಮುಳಗುಂದ, ಎಸ್.ಸಿ. ಘಟಕ ಗದಗ ತಾಲೂಕಾಧ್ಯಕ್ಷರಾಗಿ ಹನುಮಪ್ಪ ದಿಂಡೇನವರ, ಕಾರ್ಮಿಕ ಘಟಕದ ಗದಗ ತಾಲೂಕಾಧ್ಯಕ್ಷರಾಗಿ ಗೋಪಾಲ ಮ.ಬಡಿಗೇರ, ಗದಗ ಜಿಲ್ಲಾ ಯುವ ಅಧ್ಯಕ್ಷರಾಗಿ ಪ್ರವೀಣ ಬಳ್ಳಾರಿ, ಕಾರ್ಮಿಕ ಘಟಕದ ಗದಗ ಜಿಲ್ಲಾಧ್ಯಕ್ಷರಾಗಿ ಶಿವಪ್ಪ ನಿಂ.ಕಮ್ಮಾರರನ್ನು ಗದಗ ಜಿಲ್ಲಾಧ್ಯಕ್ಷ ಶಿವಾನಂದ ಮೂಲಿಮನಿ ನೇಮಕ ಮಾಡಿ ಆದೇಶಪತ್ರ ವಿತರಿಸಿದರು.
ಈ ಸಂದರ್ಭದಲ್ಲಿ ವೀರಪ್ಪ ಸೋಮಪ್ಪ ರಾಮಗಿರಿ, ಪಾರೋಜಿ ಬೈರವಾಡಿ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.



