ವಿಜಯಸಾಕ್ಷಿ ಸುದ್ದಿ, ಗದಗ : ಬಡವರ, ರೈತರ ಮತ್ತು ಶ್ರಮಿಕರ ಹಿತಕ್ಕಾಗಿ ಸುಮಾರು 25 ವರ್ಷಗಳಿಂದ ತಮ್ಮ ತನು-ಮನ- ಧನ ಸಹಾಯದಿಂದ ನಿರಂತರವಾಗಿ ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ಗದಗಿನ ಗೋವಿಂದರಾಜ ನಾರಾಯಣ ಪನ್ನೂರ ಅವರ ಅಪಾರ ಸೇವೆಯನ್ನು ಪರಿಗಣಿಸಿ ಸಮಾಜವಾದಿ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ ಯಾದವ್ ಅವರ ಆದೇಶದ ಮೇರೆಗೆ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿಭಾಗದ ರಾಜ್ಯಾಧ್ಯಕ್ಷರನ್ನಾಗಿ ಗದಗಿನ ಗೋವಿಂದರಾಜ ನಾರಾಯಣ ಪನ್ನೂರ ಅವರನ್ನು ನೇಮಕ ಮಾಡಿ ಆದೇಶಿಸಲಾಗಿದೆ ಎಂದು ಕರ್ನಾಟಕ ರಾಜ್ಶ ಸಮಾಜವಾದಿ ಪಾರ್ಟಿ ಅಧ್ಶಕ್ಷ ಎನ್ ಮಂಜಪ್ಪ ತಿಳಿಸಿದ್ದಾರೆ.
ಪನ್ನೂರರು ಕರ್ನಾಟಕ ರಾಜ್ಯಾದ್ಯಂತ ತಮ್ಮ ಸಾಮಾಜಿಕ ಸೇವೆಯೊಂದಿಗೆ ಮುಂದುವರಿದು ಪಕ್ಷದ ಪದಾಧಿಕಾರಿಗಳನ್ನು ಆಯ್ಕೆ ಮಾಡಿ, ಪಕ್ಷವನ್ನು ಸಂಘಟಿಸಲು ಆದೇಶ ಪತ್ರದಲ್ಲಿ ಸೂಚಿಸಲಾಗಿದೆ. ಪನ್ನೂರರಿಗೆ ಸಮಾಜವಾದಿ ಪಾರ್ಟಿಯ ಕಾರ್ಯಕರ್ತರು, ಅಭಿಮಾನಿಗಳು ಮತ್ತು ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.