ಬೆಂಗಳೂರು;- ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಆಯ್ಕೆ ಅತಿ ಶೀಘ್ರದಲ್ಲೇ ಆಗುತ್ತೆ ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ.ಬಿಎಸ್ ಯಡಿಯೂರಪ್ಪ ಅವರ ರಾಜ್ಯ ಪ್ರವಾಸಕ್ಕೆ ಹೈಕಮಾಂಡ್ ಬ್ರೇಕ್ ಹಾಕಿದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಬಿ.ವೈ.ವಿಜಯೇಂದ್ರಗೆ ಉತ್ತರಿಸಿದ್ದಾರೆ. ಖಂಡಿತ ಇಲ್ಲ ಯಡಿಯೂರಪ್ಪ ಹಿರಿಯ ನಾಯಕರಿದ್ದಾರೆ, ಅವರು ಸ್ಚತಂತ್ರರು. ಅವರಿಗೆ ಯಾವಾಗ ಸರಿ ಅನಿಸುತ್ತೆ ಆಗ ಪ್ರವಾಸ ಮಾಡುತ್ತಾರೆ.
Advertisement
ಬಿಎಸ್ ಯಡಿಯೂರಪ್ಪ ಎಲ್ಲಿ ಬೇಕಾದಲ್ಲಿ ಪ್ರವಾಸ ಮಾಡುತ್ತಾರೆ. ಯಾರೂ ಕೂಡ ಅದನ್ನ ತಡೆಯುವಂತಹ ಪ್ರಯತ್ನ ಮಾಡುವುದಿಲ್ಲ, ಮಾಡುವ ಅವಶ್ಯಕತೆಯೂ ಇಲ್ಲ. ಬಿಜೆಪಿ ನೂತನ ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕ ಸ್ಥಾನ ಎರಡೂ ಒಟ್ಟಿಗೆ ಅತಿ ಶೀಘ್ರದಲ್ಲೇ ಆಗುತ್ತೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.