ನೂತನ ಪದಾಧಿಕಾರಿಗಳ ಆಯ್ಕೆ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೀಶ್ವರ: ಪಟ್ಟಣದ ದಿ. ಲಕ್ಷ್ಮೀಶ್ವರ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ 2025-30 ಸಾಲಿನ ನೂತನ ಆಡಳಿತ ಮಂಡಳಿಗೆ ಇತ್ತಿಚೇಗೆ ಚುನಾವಣೆ ನಡೆದು ಸದಸ್ಯರು ಆಯ್ಕೆಯಾಗಿದ್ದರು. ಸೋಮವಾರ ಸೇರಿದ್ದ ಸಭೆಯಲ್ಲಿ ನೂತನ ಅಧ್ಯಕ್ಷರನ್ನಾಗಿ ಸೋಮೇಶ ಜಗದೀಶ ಉಪನಾಳ ಹಾಗೂ ಉಪಾಧ್ಯಕ್ಷರನ್ನಾಗಿ ಶೇಖಪ್ಪ ಮಲ್ಲಪ್ಪ ಕಾಳೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

Advertisement

ಆಯ್ಕೆಯಾದ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಸದಸ್ಯರು ಅಭಿನಂದಿಸಿದರು. ಈ ವೇಳೆ ಮಾತನಾಡಿದ ಅವರು, ಸಹಕಾರ ಕ್ಷೇತ್ರದಲ್ಲಿ ದೊರಕಿರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುವದರ ಜೊತೆಗೆ ಟಿಎಪಿಸಿಎಂಎಸ್ ಅನ್ನು ಪ್ರಗತಿಪಥದತ್ತ ಎಲ್ಲರ ಸಹಕಾರದಿಂದ ಕೊಂಡೊಯ್ಯುತ್ತೇವೆ ಎಂದು ಹೇಳಿದರು.

ಇದೇ ವೇಳೆ ನೂತನ ನಿರ್ದೇಶಕರಾಗಿ ಆಯ್ಕೆಯಾದ ಶಂಕ್ರಪ್ಪ ದೇಸಾಯಿ, ಮಹೇಶ ಹೊಗೆಸೊಪ್ಪಿನ, ವಿರೂಪಾಕ್ಷಪ್ಪ ಪಡಗೇರಿ, ಈರಣ್ಣ ಮುಳಗುಂದ, ಜಯಕ್ಕ ಕಳ್ಳಿ, ಸುರೇಶ ಬಂಕಾಪೂರ, ರತ್ನಾ ಗುಂಜಳ, ಮೇಘಾ ಪಾಟೀಲ, ಸುನೀಲ ಮಹಾಂತಶೆಟ್ಟರ, ವೀರಭದ್ರಪ್ಪ ಶಿಗ್ಲಿ, ಈರಪ್ಪ ಮೇಗಲಮನಿ, ಬಸವರಾಜ ವಾಲೀಕರ ಅವರನ್ನು ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಹಿರಿಯ ಸಹಕಾರಿಗಳಾದ ಗದಿಗೆಪ್ಪ ಯತ್ನಳ್ಳಿ, ಪ್ರಕಾಶ ಉಪನಾಳ, ನೀಲಪ್ಪ ಹತ್ತಿ ಮುಂತಾದವರು ಹಾಜರಿದ್ದರು.


Spread the love

LEAVE A REPLY

Please enter your comment!
Please enter your name here