ವಿಜಯಸಾಕ್ಷಿ ಸುದ್ದಿ, ಬೆಟಗೇರಿ: ಇತ್ತೀಚೆಗೆ ನಡೆದ ಬೆಟಗೇರಿ ಎಸ್.ಎಸ್.ಕೆ ತರುಣ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ 2025-26ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ನಾರಾಯಣಸಾ ಆರ್.ಕಬಾಡಿ, ಉಪಾಧ್ಯಕ್ಷರಾಗಿ ಶ್ಯಾಮ್ ಎನ್.ಮಿಸ್ಕಿನ್, ಗೌರವ ಕಾರ್ಯದರ್ಶಿಗಳಾಗಿ ಸೋಮಶೇಖರ ಆರ್.ಮೇರವಾಡೆ, ಸಹಕಾರ್ಯದರ್ಶಿಯಾಗಿ ಗಣೇಶ ಎಚ್.ಪವಾರ, ಖಜಾಂಚಿಯಾಗಿ ಶ್ರೀರಾಮ ಎಸ್.ಹಬೀಬ, ಲೆಕ್ಕ ತಪಾಸಿಗರಾಗಿ ಶ್ರೀಕಾಂತ ಜೆ.ಕಬಾಡಿ ಹಾಗೂ ವ್ಯಾಯಾಮಶಾಲೆ ಚೇರಮನ್‌ರಾಗಿ ಸತ್ಯನಾರಾಯಣ ಎಫ್.ಮೇರವಾಡೆ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
Advertisement
ಆಯ್ಕೆಯಾದ ಎಲ್ಲ ಪದಾಧಿಕಾರಿಗಳಿಗೆ ಪಂಚ ಟ್ರಸ್ಟ ಕಮಿಟಿ, ತರುಣ ಸಂಘ, ಮಹಿಳಾ ಮಂಡಳದ ಸದಸ್ಯರು, ಪದಾಧಿಕಾರಿಗಳು ಸೇರಿದಂತೆ ಸಮಾಜಬಾಂಧವರು ಅಭಿನಂದಿಸಿದ್ದಾರೆ.