ಅನ್ನಪೂರ್ಣೆಶ್ವರಿ ಜಾತ್ರಾ ಮಹೋತ್ಸವದ ಪದಾಧಿಕಾರಿಗಳ ಆಯ್ಕೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಅಡವೀಂದ್ರ ಸ್ವಾಮಿ ಮಠದ ದಸರಾ ಮಹೋತ್ಸವ ಹಾಗೂ ಶ್ರೀ ಅನ್ನಪೂರ್ಣೆಶ್ವರಿ ಜಾತ್ರಾ ಮಹೋತ್ಸವದ ನೂತನ ಪದಾಧಿಕಾರಿಗಳ ಆಯ್ಕೆಯು ಶ್ರೀಮಠದಲ್ಲಿ ಶ್ರೀಮಠದ ವೇ.ಮೂ. ಮಹೇಶ್ವರ ಸ್ವಾಮಿಗಳು ಹೊಸಳ್ಳಿಮಠ ಹಾಗೂ ಪಂ. ಗುರುಸ್ವಾಮಿ ಕಲಕೇರಿ ಸಮ್ಮುಖದಲ್ಲಿ ಜರುಗಿತು.

Advertisement

ಗೌರವ ಅಧ್ಯಕ್ಷರಾಗಿ ಎಸ್.ಪಿ. ಸಂಶಿಮಠ, ಅಧ್ಯಕ್ಷರಾಗಿ ಸದಾಶಿವಯ್ಯ ಎಸ್.ಮದರಿಮಠ, ಪ್ರಧಾನ ಕಾರ್ಯದರ್ಶಿಯಾಗಿ ಶರಣಬಸಪ್ಪ ಗುಡಿಮನಿ, ಸಹಕಾರ್ಯದರ್ಶಿಯಾಗಿ ಗುರುಬಸವಲಿಂಗ ತಡಸದ, ಕೋಶಾಧ್ಯಕ್ಷರಾಗಿ ವಿರುಪಣ್ಣ ಬಳ್ಳೂಳ್ಳಿ ಆಯ್ಕೆಯಾಗಿದ್ದಾರೆ.

ವಿವಿಧ ಉಪಸಮಿತಿಗಳನ್ನು ರಚಿಸಲಾಗಿದ್ದು, ಸ್ವಾಗತ ಸಮಿತಿಯಲ್ಲಿ ಚಂದ್ರು ಬಾಳಿಹಳ್ಳಿಮಠ, ವೀರೇಶ ಕೂಗುಮಠ, ಉಮೇಶ ಹುಬ್ಬಳ್ಳಿ, ಪ್ರಭುಸ್ವಾಮಿ ದಂಡಾವತಿಮಠ, ಶ್ರೀಧರ ಧರ್ಮಾಯತ, ಪ್ರಸಾದ ಸಮಿತಿಯಲ್ಲಿ ವೀರಣ್ಣ ಬಾಳಿಕಾಯಿ, ವ್ಹಿ.ಎಚ್. ದೇಸಾಯಿಗೌಡ್ರ, ರಾಮನಗೌಡ ದಾನಪ್ಪಗೌಡ್ರ, ವಿನಾಯಕ ತೇಜೇಗೌಡ್ರಪಾಟೀಲ, ವೇದಿಕೆ ಸಮಿತಿಯಲ್ಲಿ ವಿನೋದ ಭಾಂಡಗೆ, ಅಪ್ಪುರಾಜ ಭದ್ರಕಾಳಿಮಠ, ಗಂಗಾಧರ ಗೊಡಚಿ, ಕುಂಭೋತ್ಸವ ಸಮಿತಿಯಲ್ಲಿ ಕಸ್ತೂರಿಬಾಯಿ ಭಾಂಡಗೆ, ಜಯಶ್ರೀ ವಸ್ತçದ, ವಿಜಯಲಕ್ಷ್ಮೀ ಹೊಸಳ್ಳಿಮಠ, ಲಕ್ಷ್ಮೀ ಭಾಂಡಗೆ ಆಯ್ಕೆಯಾಗಿದ್ದಾರೆ.

ಮಹಿಳಾ ಸಮಿತಿಯ ಅಧ್ಯಕ್ಷರಾಗಿ ಸುವರ್ಣಾ ಮದರಿಮಠ, ಕಾರ್ಯದರ್ಶಿಯಾಗಿ ಗೀತಾ ಹೂಗಾರ, ಸಹ ಕಾರ್ಯದರ್ಶಿಯಾಗಿ ಸುಷ್ಮಾ ಖಂಡೆಪ್ಪಗೌಡ್ರ, ಕೋಶಾಧ್ಯಕ್ಷರಾಗಿ ಅಶ್ವಿನಿ ನೀಲಗುಂದ ಆಯ್ಕೆಯಾಗಿದ್ದಾರೆ. ನಿರ್ದೆಶಕರಾಗಿ ಸುಜಾತಾ ಗುಡಿಮನಿ, ಭಾಗ್ಯಶ್ರೀ ಕುರಡಗಿ, ಲಲಿತಾ ತಡಸದ, ಸವಿತಾ ಧರ್ಮಾಯತ, ಜ್ಯೋತಿ ದಾನಪ್ಪಗೌಡ್ರ ಅವರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.


Spread the love

LEAVE A REPLY

Please enter your comment!
Please enter your name here