ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದಲ್ಲಿ ಸೋಮವಾರ ತಾಲೂಕಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಸಭೆ ಜರುಗಿತು. ಸಭೆಯಲ್ಲಿ ತಾಲೂಕು ಘಟಕದ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಗಂಗಾಧರ ಬಾಲೇಹೊಸೂರು ಅವರನ್ನು ಗೌರವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
Advertisement
ತಾಲೂಕು ಘಟಕದ ಅಧ್ಯಕ್ಷರಾಗಿ ನೀಲಕಂಠ ಬುರುಡಿ, ಉಪಾಧ್ಯಕ್ಷರಾಗಿ ರಾಯಪ್ಪ ಹತ್ತಿಕಾಳ, ಸಹಕಾರ್ಯದರ್ಶಿಯಾಗಿ ಶ್ರೀಕಾಂತ ಹೂಗಾರ, ಖಜಾಂಚಿಯಾಗಿ ದಾದಫೀರ್ ಯಲ್ಲನೂರ, ನಿರ್ದೇಶಕರನ್ನಾಗಿ ಶಿವರಾಜ ಗೋಸಾವಿ , ರವಿ ಗೌರಿಹಳ್ಳಿ, ಆನಂದ ಚಕ್ರಸಾಲಿ, ಚೇತನ ಮಾಗಡಿ, ಪ್ರಶಾಂತ ಹಡಪದ, ಅಶೋಕ ಕೋರಕನವರ, ರಫೀಕ ಜಮಖಂಡಿ ಅವರನ್ನು ಒಮ್ಮತದಿಂದ ಆಯ್ಕೆ ಮಾಡಲಾಯಿತು.