ವಿಜಯಸಾಕ್ಷಿ ಸುದ್ದಿ, ಗದಗ: ಕಳಸಾಪೂರ ಹುಡ್ಕೋ ನಿವಾಸಿಗಳ ಸಂಘದ ಸಭೆಯು ಡಾ. ಆರ್.ಎಚ್. ಕಬಾಡಿಯವರ ನೇತೃತ್ವದಲ್ಲಿ ಇತ್ತೀಚೆಗೆ ನಡೆಯಿತು. ಸಭೆಯಲ್ಲಿ ಡಾ. ಆರ್.ಎಚ್. ಕಬಾಡಿಯವರನ್ನು ಸಂಘದ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ನಿರ್ಣಯಿಸಲಾಯಿತು.
ಇದೇ ಸಂದರ್ಭದಲ್ಲಿ ಪೊಲೀಸ ಪಾಟೀಲರನ್ನು ಗೌರವ ಕಾರ್ಯದರ್ಶಿಯನ್ನಾಗಿ, ಎಲ್.ಟಿ. ರಾಯಬಾಗಿಯವರನ್ನು ಕೋಶಾಧ್ಯಕ್ಷರನ್ನಾಗಿ, ಡಾ. ಆರ್.ಎಚ್. ಕಬಾಡಿಯವರು ಸೂಚಿಸಿದರು. ಸಭೆಯಲ್ಲಿ ಸುಮಾರು 22 ಜನ ಹೊಸ ಸದಸ್ಯರು ಸೇರ್ಪಡೆಗೊಂಡಿದ್ದು, ಅವರನ್ನು ಗೌರವಪೂರ್ವಕವಾಗಿ ಸ್ವಾಗತಿಸಲಾಯಿತು.
ಇಲ್ಲಿಯವರೆಗೆ ಸಂಘವು ನಡೆದು ಬಂದ ದಾರಿಯ ಬಗ್ಗೆ ಡಾ. ಆರ್.ಎಚ್. ಕಬಾಡಿಯವರು ವಿವರಿಸಿದರು. ಪ್ರತಿ ತಿಂಗಳು 2ನೇ ಮತ್ತು 4ನೇ ರವಿವಾರ ನಿಗದಿತ ಸ್ಥಳದಲ್ಲಿ ಸರ್ವ ಸದಸ್ಯರ ಸಭೆಯನ್ನು ನಡೆಸುವಂತೆ ನಿರ್ಧರಿಸಲಾಯಿತು. ಮುಂದಿನ ಸಭೆಯು ಜನವರಿ 12ರಂದು ಬೆಳಗಿನ 10-30 ಗಂಟೆಗೆ ಇದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಪಾಲ್ಗೊಳ್ಳುವಂತೆ ಸಂಘದ ಕಾರ್ಯದರ್ಶಿ ಪೊಲೀಸಪಾಟೀಲರು ಇದೇ ಸಂದರ್ಭದಲ್ಲಿ ವಿನಂತಿಸಿದರು.