
ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ತಾಲೂಕು ಗುತ್ತಿಗೆದಾರರ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ತೆಲಗಿ ಉಮಾಕಾಂತ, ಉಪಾಧ್ಯಕ್ಷರಾಗಿ ಎಚ್.ಎಂ. ವಿಕ್ರಮ, ಕಾರ್ಯದರ್ಶಿಯಾಗಿ ಎಚ್. ಜಯಪ್ರಕಾಶ ಅವಿರೋಧವಾಗಿ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ತೋಟಪ್ಪ ಶೆಟ್ಟಿ, ಸಹ ಕಾರ್ಯದರ್ಶಿಯಾಗಿ ಜಿ.ಆರ್. ರವಿನಾಯ್ಕ್, ಖಜಾಂಚಿಯಾಗಿ ಬಿ.ಜಬಿವುಲ್ಲ ಆಯ್ಕೆಯಾದರು.
ಸಂಘದ ನಿರ್ದೇಶಕರಾಗಿ ಹುಣಿಸಿಹಳ್ಳಿ ಮಂಜುನಾಥ, ರಾಗಿರೊಟ್ಟಿ ಜಾಕೀರ ಹುಸೇನ್, ಪೊತಲಕಟ್ಟಿ ಮಹೇಶಪ್ಪ, ಬೆಂಡಿಗೇರಿ ಸಣ್ಣತಾಂಡ ರಮೇಶನಾಯ್ಕ್ ಮತ್ತು ಜಿಲ್ಲಾ ಪ್ರತಿನಿಧಿಯಾಗಿ ನಂದಬೇವೂರು ಮಂಜುನಾಥ ಅವರು ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಗುತ್ತಿಗೆದಾರರಾದ ಬಾಣದ ಅಂಜಿನಪ್ಪ, ಮಹಾಂತೇಶನಾಯ್ಕ್, ಟಿ.ಅಂಜಿನಪ್ಪ, ಛಲವಾದಿ ಪರಶುರಾಮ, ನಾಗರಾಜನಾಯ್ಕ್, ಪ್ರವೀಣ್‌ಕುಮಾರ, ಅರುಣ್ ಕಮಾರ ಉಮೇಶನಾಯ್ಕ್, ನರ‍್ಯಾನಾಯ್ಕ, ಚಂದ್ರನಾಯ್ಕ, ಭೋವಿ ಬಸವರಾಜ ಸೇರಿದಂತೆ ಇತರರು ಉಪಸ್ಥಿತರಿದ್ದರು.