ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಇಲಾಖೆ (ನಗರ) ನೌಕರರ ಪತ್ತಿನ ಸಹಕಾರ ಸಂಘ ನಿಯಮಿತ ಗದಗ ಸಂಘದಲ್ಲಿ 2023-28ನೇ ಸಾಲಿಗಾಗಿ ನಿರ್ದೇಶಕರೊಬ್ಬರು ನಿಧನದಿಂದ ತೆರವಾಗಿದ್ದ ಆಡಳಿತ ಮಂಡಳಿ ಪರಿಶಿಷ್ಟ ಜಾತಿ (ಎಸ್.ಸಿ.) ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಿರ್ದೇಶಕರಾಗಿ ಡಿ.ಎಸ್. ಮೀಶೇಣ್ಣವರ ಹಾಗೂ ಉಳಿದ ಅವಧಿಗೆ ಉಪಾಧ್ಯಕ್ಷರಾಗಿ ಶ್ರೀಕಾಂತಯ್ಯ ಎಸ್. ಉಣ್ಣಿಮಠ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಸಂಘದ ರಿಟರ್ನಿಂಗ್ ಅಧಿಕಾರಿ ಬಸವರಾಜ ನೀಡಗುಂದಿಮಠ ತಿಳಿಸಿದ್ದಾರೆ.
ಸಭೆಯಲ್ಲಿ ಸಂಘದ ಅಧ್ಯಕ್ಷರು ಮಂಗಳ ತಾಪಸ್ಕರ, ನಿರ್ದೇಶಕರಾದ ಬಿ.ಎಸ್. ಮೆಣಸಿನಕಾಯಿ, ಎಸ್.ಬಿ. ಇಟಗಿ, ಸಿ.ಜಿ. ಹುಡೇದ, ಐ.ವಾಯ್. ತಹಸೀಲ್ದಾರ, ಡಿ.ವಾಯ್. ಕಂಬಳಿ, ಎಸ್.ಎಸ್. ಅಣ್ಣಿಗೇರಿ, ಜಿಲ್ಲಾ ನೌಕರರ ಸಂಘದ ನಿರ್ದೇಶಕ ಡಿ.ಎಸ್. ತಳವಾರ, ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಕೆ. ಮಂಗಳಗುಡ್ಡ, ಎಸ್.ಎನ್. ಬಳ್ಳಾರಿ ಗುರುಗಳು ಮುಂತಾದವರು ಹಾಜರಿದ್ದರೆಂದು ಸಂಘದ ಕಾರ್ಯದರ್ಶಿ ಎಲ್.ವ್ಹಿ. ಪಾಟೀಲ ತಿಳಿಸಿದ್ದಾರೆ.



