ಶಿಗ್ಲಿ ಗ್ರಾ.ಪಂ ಅಧ್ಯಕ್ಷರ ಆಯ್ಕೆ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಶಿಗ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸಂಗೀತಾ ರಾಘವೇಂದ್ರ ಪೂಜಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ದುಂಡವ್ವ ಹಾದಿಮನಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರಿಂದ ತೆರವಾದ ಸ್ಥಾನಕ್ಕೆ ಶುಕ್ರವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ಒಟ್ಟು 28 ಸದಸ್ಯರನ್ನೊಳಗೊಂಡ ಗ್ರಾ.ಪಂ ಅಧ್ಯಕ್ಷ ಸ್ಥಾನಕ್ಕೆ ಸಂಗೀತಾ ಪೂಜಾರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ತಾ.ಪಂ ಇಓ ಕೃಷ್ಣಪ್ಪ ಧರ್ಮರ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

Advertisement

ಸದಸ್ಯರಾದ ಶಿವಣ್ಣ ಕುರಿ, ಬಸಣ್ಣ ಕರ್ಜಗಿ, ಯಲ್ಲಪ್ಪ ತಳವಾರ, ಕೃಷ್ಣ ಬಿದರಹಳ್ಳಿ, ಸಂತೋಷ ತಾಂದಳೆ, ಸುರೇಶ ಸ್ವಾದಿ, ಗಣೇಶ ಲಮಾಣಿ, ರಮೇಶ ಹಣಗಿ, ಮುದಕಣ್ಣ ಗಾಡದ, ಈರಣ್ಣ ಅಂಬಲಿ, ಗುಲ್ಜರಾಭಾನು ಶೇಖ್, ಮಮತಾಜಿ ಶಿರಬಡಗಿ, ಶೈಲಜಾ ಹೂಗಾರ, ನೀಲಮ್ಮ ಸುರಣಗಿ, ಶೈಲಜಾ ಜನಿವಾರದ, ರೇಣುಕಾ ಆತಡಕರ, ಮಹದೇವಿ ತಳವಾರ, ಜಯಶ್ರೀ ತಳವಾರ, ಜಯಶ್ರೀ ಕರ್ಜಗಿ, ಈರಮ್ಮ ಮಾದನಹಳ್ಳಿ, ದುಂಡಮ್ಮ ಹಾದಿಮನಿ, ಲಲಿತಾ ತವರಿ, ಭರತ ಬಳಿಗಾರ ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here