ವಿಜಯಸಾಕ್ಷಿ ಸುದ್ದಿ, ಮುಳಗುಂದ: ಪಟ್ಟಣದ ಮುಳಗುಂದ ವಿಭಾಗದ ಪ್ರಾಥಮಿಕ ಶಿಕ್ಷಕ-ಶಿಕ್ಷಕಿಯರ ಪತ್ತು ಬೆಳೆಸುವ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.1ರ ಸಹ ಶಿಕ್ಷಕ ಎಂ.ಎಂ. ಮೇಗಲಮನಿ, ಉಪಾಧ್ಯಕ್ಷರಾಗಿ ನೀಲಗುಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಎಂ. ನವಲಿ ಆಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿಯ ಸದಸ್ಯರಾಗಿ ಯು.ಆಯ್. ಭಜಂತ್ರಿ, ಬಿ.ವಿ. ಹುಡೇದ, ಎಸ್.ಡಿ. ಗುಂಜಳ, ಎಸ್.ಎಂ. ಮಡ್ಡಿಕಾರ, ಆರ್. ಪೂಜಾರ, ಎಸ್.ಬಿ. ಗುಂಜಳ, ಪಿ.ಎಸ್. ಮರಿದೇವರಮಠ, ಬಿ.ಎಸ್. ಜೋಗಿ, ಎಂ.ಎ. ನದಾಫ್, ಕೆ.ಎಸ್. ಗಾಣಿಗೇರ, ಬಿ.ವಿ. ಚಕ್ರಸಾಲಿ ಆಯ್ಕೆಯಾಗಿದ್ದಾರೆ ಎಂದು ಗದಗ ಸಹಕಾರಿ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಅಧೀಕ್ಷಕರಾದ ಶಾಚಿತಾ ಎಚ್.ಎಂ ಪ್ರಕಟಣೆಗೆ ತಿಳಿಸಿದ್ದಾರೆ.




