ವಿಜಯಸಾಕ್ಷಿ ಸುದ್ದಿ, ಗದಗ: ಎಸ್.ಎಸ್.ಕೆ ಸಮಾಜದಿಂದ ಜರುಗಲಿರುವ ಶ್ರೀ ಸೋಮವಂಶ ಸಹಸ್ರಾರ್ಜುನ ಮಹಾರಾಜರ ಜಯಂತ್ಯುತ್ಸವದ ನಿಮಿತ್ತ ಉಪಸಮಿತಿ ರಚಿಸಲಾಗಿದ್ದು, ಸಮಿತಿಯ ಚೆರ್ಮನ್ ಆಗಿ ಮಾರುತಿ ಪವಾರ, ವೈಸ್ ಚೆರ್ಮನ್ ಆಗಿ ಭೀಮಸಾ ಕಾಟಿಗರ, ಕಾರ್ಯದರ್ಶಿಗಳಾಗಿ ಬಾಬು ಶಿದ್ಲಿಂಗ, ಸಹ ಕಾರ್ಯದರ್ಶಿಗಳಾಗಿ ರೇಖಾಬಾಯಿ ಖಟವಟೆ, ಖಜಾಂಚಿಯಾಗಿ ರಾಜು ಖಟವಟೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಗದಗ ಎಸ್.ಎಸ್.ಕೆ ಸಮಾಜ ಪಂಚ ಕಮಿಟಿಯ ಗೌರವ ಕಾರ್ಯದರ್ಶಿ ವಿನೋದ ಶಿದ್ಲಿಂಗ ತಿಳಿಸಿದ್ದಾರೆ.
Advertisement
ಆಯ್ಕೆಯಾದ ಎಲ್ಲ ಪದಾಧಿಕಾರಿಗಳಿಗೆ ಗದಗ ಎಸ್.ಎಸ್.ಕೆ ಸಮಾಜ ಪಂಚ ಕಮಿಟಿ, ತರುಣ ಸಂಘ, ಮಹಿಳಾ ಮಂಡಳದ ಸದಸ್ಯರು, ಪದಾಧಿಕಾರಿಗಳು ಸೇರಿದಂತೆ ಸಮಾಜಬಾಂಧವರು ಅಭಿನಂದಿಸಿದ್ದಾರೆ.