ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ನೂತನವಾಗಿ ಆರಂಭವಾದ ಇಲ್ಲಿಯ ಲಕ್ಷ್ಮಿ ನಾರಾಯಣ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾಗಿ ಬಸವರಾಜ ಮುಳ್ಳಾಳ ವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಮೃತ್ಯಂಜಯ ನಡುವಿನಮಠ ಆಯ್ಕೆಯಾದರು.
ಬಸವರಾಜ ಕವಲೂರ, ವಿನಾಯಕ ಡಿಗ್ಗಾವಿ, ರಾಗಿಣಿ ಕಲಾಲ, ಸುವರ್ಣ ಕವಲೂರು, ಲಲಿತಾ ಮುಳ್ಳಾಳ, ಮಹಾದೇವ ಈಟಿ, ದ್ರಾಕ್ಷಾಯಿಣಿ ನಡುವಿನಮಠ, ಕಮಲಾಕ್ಷಿ ಡಿಗ್ಗಾವಿ, ಮಲ್ಲಿಕಾರ್ಜುನ ಸೊಪ್ಪಿನ ಹಾಗೂ ವೀರಣ್ಣ ಅಬ್ಬಿಗೇರಿ ಅವರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಆಗಮಿಸಿದ್ದ ಜಿಲ್ಲಾ ಸಹಕಾರಿ ಇಲಾಖೆಯ ಸಹಾಯಕ ನಿರ್ದೇಶಕ ಜಗದೀಶ ಉಳವಿ ಘೋಷಿಸಿದ್ದಾರೆ.



