ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಮಾ.2ರಂದು ಜರುಗಿದ ಶಿರಹಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2025ರ ಚುನಾವಣೆಯಲ್ಲಿ ಸಾಲಗಾರರ ಪರಿಶಿಷ್ಟ ಜಾತಿ ಮತಕ್ಷೇತ್ರದಿಂದ ದಯಾನಂದ ದೇವಪ್ಪ ಲಮಾಣಿ ಆಯ್ಕೆಯಾಗಿದ್ದಾರೆ.
Advertisement
ಈ ಕುರಿತು ಪ್ರತಿಕ್ರಿಯಿಸಿದ ತಾ.ಪಂ ಮಾಜಿ ಸದಸ್ಯ ದೇವಪ್ಪ ಲಮಾಣಿ, ಪರಿಶಿಷ್ಟ ಜಾತಿ ಮತಕ್ಷೇತ್ರದಿಂದ ನಮ್ಮ ಭಾಗದಿಂದ ದಯಾನಂದ ಲಮಾಣಿ ಆಯ್ಕೆಯಾಗಿದ್ದು, ಕೃಷಿ ಪತ್ತಿನ ಸಹಕಾರ ಸಂಘದಿಂದ ರೈತರಿಗೆ ಉಪಯುಕ್ತವಾದಂತಹ ಮಾಹಿತಿಗಳನ್ನು ನೀಡುವುದರ ಜೊತೆಗೆ ಸರಕಾರದ ಸೌಲಭ್ಯವನ್ನು ಮುಟ್ಟಿಸುವ ಕೆಲಸ ಮಾಡಲಾಗುವುದು ಎಂದರು.
ಎನ್.ಕೆ. ಲಮಾಣಿ, ಪರಮೇಶ ಪರಬ, ಅಜ್ಜು ಪಾಟೀಲ, ಅಪ್ಪಣ್ಣ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.