ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ರಾಜ್ಯ ಸರ್ಕಾರಿ ನೌಕರರ ಸಂಘದ ಲಕ್ಷ್ಮೇಶ್ವರ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆಗೆ ಸೋಮವಾರ ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆ ನಂ. 1ರಲ್ಲಿ ಚುನಾವಣೆ ನಡೆಯಿತು. ವಿವಿಧ ಇಲಾಖೆಗಳ ಸರ್ಕಾರಿ ನೌಕರರ ಸಂಘದ ಒಟ್ಟು 20 ಸದಸ್ಯರ ಆಯ್ಕೆ ಪ್ರಕ್ರಿಯೆಯಲ್ಲಿ 15 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದರು.
ಉಳಿದ 3 ಇಲಾಖೆಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ 3 ಸದಸ್ಯರು, ಪ್ರೌಢಶಾಲಾ ಶಿಕ್ಷಕರ ಸಂಘದ ಒಬ್ಬ ಸದಸ್ಯರು ಹಾಗೂ ನ್ಯಾಯಾಂಗ ಇಲಾಖೆಯ ಒಂದು ಸ್ಥಾನಕ್ಕೆ ಚುನಾವಣೆ ನಡೆಯಿತು. ಪ್ರಾಥಮಿಕ ಶಾಲಾ ಶಿಕ್ಷಕರ ವತಿಯಿಂದ 5 ಸದಸ್ಯರು ಚುನಾವಣೆಗೆ ಸ್ಪರ್ಧಿಸಿದ್ದರು. ಇದರಲ್ಲಿ ಎಂ.ಡಿ. ವಾರದ 222, ಬಿ.ಎಂ. ಯರಗುಪ್ಪಿ 207 ಹಾಗೂ ಎಂ.ಎ. ನದಾಫ್ 190 ಮತ ಪಡೆದು ಆಯ್ಕೆಯಾದರು. ಡಿ.ಎಂ. ಶಿರುಂಜ 88, ಡಿ.ಎಂ. ದೊಡ್ಡಮನಿ 131 ಮತ ಪಡೆದು ಪರಾಭವಗೊಂಡರು.
ಪ್ರೌಢಶಾಲಾ ಶಿಕ್ಷಕರ ವತಿಯಿಂದ ಎ.ಎಂ. ಅಕ್ಕಿ 47 ಮತ ಪಡೆದು ಆಯ್ಕೆಯಾದರೆ, ಎಸ್.ಜಿ. ಅಂಗಡಿ 38 ಮತ ಪಡೆದು ಪರಾಭವಗೊಂಡರು. ನ್ಯಾಯಾಂಗ ಇಲಾಖೆಯ ಆನಂದ ಕರ್ಜಗಿ 29 ಮತ ಪಡೆದು ಆಯ್ಕೆಯಾದರೆ ಕುಮಾರ ಬಟ್ಟೂರ 14 ಮತ ಪಡೆದು ಪರಾಭವಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಎ.ಎಂ. ಮಠದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.